ಸಿಂದಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ರವರು ನವೆಂಬರ್ 7 ರಂದು ಶಾಲೆಗೆ ಸೇರಿದ ದಿನವನ್ನು ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸುವಂತೆ ಆಗ್ರಹಿಸಿ ದಲೀತ ಸೇನೆ ಪದಾಧಿಕಾರಿಗಳು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಶಿರಸ್ತೆದಾರ ಜಿ.ಎಸ್.ರೋಡಗಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್.ಎ.ಸಿಂದಗಿಕರ ಮಾತನಾಡಿ, ನವೆಂಬರ್ 7, 1900 ರಂದು ಭಾರತಿಯರ ಪಾಲಿಗೆ ವಿಶೇಷ ದಿನ ಏಕೆಂದರೆ ಭಾರತ ದೇಶದ ಭವಿಷ್ಯವನ್ನು ಉದ್ದರಿಸಿದ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾಬಿ.ಆರ್.ಅಂಬೇಡ್ಕರ ಅವರು ಶಾಲೆಗೆ ಸೇರಿದ ದಿನವಾಗಿದೆ. ಡಾಭೀಮರಾವ್ ಅಂಬೇಡ್ಕರರವರು ಶಾಲೆಗೆ ಸೇರುವ ಮೂಲಕ ಇಡೀ ಭಾರತದ ಸಾಮಾಜಿಕ, ಆರ್ಥಿಕ, ಸೇರಿದಂತೆ ಅನೇಕ ಬದಲಾವಣೆಯನ್ನು ಮಾಡುವಂತಹ ಶಿಕ್ಷಣ ಪಡೆಯಲು ತಳಪಾಯ ಹಾಕಿದ ದಿನವೆಂದು ಹೇಳಬಹುದಾಗಿದೆ. ಬಾಬಾಸಾಹೇಬ ಅಂಬೇಡ್ಕರರವರು 1900 ರ ನವೆಂಬರ್ 7 ರಂದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪ್ರಧಾಬಸಿಂಗ್ ಹೈಸ್ಕೂಲ್ ಶಾಲೆಗೆ ಸೇರಿಸುತ್ತಾರೆ. ಅಂದಿನ ದಿನಗಳಲ್ಲಿ ಸಾಮಾಜಿಕ ದೌರ್ಜನ್ಯ, ಅಸ್ಪೃಶ್ಯತೆಯಂಥ ಅನಿಷ್ಟ ಪದ್ಧತಿಗಳನ್ನು ತಮ್ಮ ಬಾಲ್ಯದಲ್ಲೆ ಅನುಭವಿಸಿಕೊಂಡು ಬೆಳೆದ ಬಾಬಾ ಸಾಹೇಬರು ಸಾಮಾಜಿಕ ತಾರತಮ್ಯದ ವಿರುದ್ಧ ದ್ವನಿಯತ್ತಲು ಪ್ರಾರಂಭಿಸಿದರು ಮುಂದೆ ವಿಧ್ಯಾಭ್ಯಾಸಕ್ಕಾಗಿ ತಾವು ಅನುಭವಿಸಿದ ನೋವನ್ನು ಮತ್ತೆ ಯಾವ ವಿಧ್ಯಾರ್ಥಿಯು ಅನುಭವಿಸದಿರಲಿ ಎಂದು ಸಂವಿಧಾನ ಕಲಂ 29 ಮತ್ತು 30 ರಲ್ಲಿ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಹಕ್ಕುಗಳನ್ನು ಕೊಟ್ಟು ವಿಧ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾದ ಡಾ||ಬಿ.ಆರ್.ಅಂಬೇಡ್ಕರ ರವರಿಗೆ ಯಾವ ರೀತಿ ಮಹಾರಾಷ್ಟ್ರ ಸರ್ಕಾರ ನವೆಂಬರ್ 7 ರಂದು ವಿಧ್ಯಾರ್ಥಿಗಳ ದಿವನವನ್ನಾಗಿ ಆಚರಿಸಲು ನಿರ್ದರಿಸಿದೆವು. ಅದೇ ರೀತಿ ಕರ್ನಾಟಕ ಸರ್ಕಾರದ ದಿನದಲಿತರ ಆಶಾಕಿರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂತಹ ಐತಿಹಾಸಿಕ ದಿನವಾದ ನವೆಂಬರ್ 7 ರಂದು ಕರ್ನಾಟಕದಲ್ಲಿಯು ಸಹ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ದಲಿತ ಸೇನೆ ಜಿಲ್ಲಾದ್ಯಕ್ಷ ಖಾಜು ಹೊಸಮನಿ, ದಲಿತ ಸೇನೆ ತಾಲೂಕಾಧ್ಯಕ್ಷ ಬಾಲಕೃಷ್ಣ ಚಲವಾದಿ, ದಲಿತ ಸೇನೆ ವಿದ್ಯಾರ್ಥಿಘಟಕ ಅದ್ಯಕ್ಷ ರಜತ ತಾಂಬೆ, ದಸ್ತಗೀರ ಆಳಂದ ಸೇರಿದಂತೆ ಅನೇಕರಿದ್ದರು.