spot_img
spot_img

೧೨ ರಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಘಟಕ ಉದ್ಘಾಟನೆ

Must Read

- Advertisement -

ದಾವಣಗೆರೆ – ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ಗುರು ಪುಟ್ಟರಾಜರ ಮತ್ತು ಅವರಿಂದ ಸ್ಥಾಪಿಸಲ್ಪಟ್ಟ ಗುರು ಸಂಸ್ಥೆಯ ಸೇವೆಗೆ ಮೀಸಲಾದ ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾಗಿದ್ದು, ಈ ಸಮಿತಿಯ ಕೇಂದ್ರ ಕಚೇರಿ ಗದುಗಿನಲ್ಲಿದೆ. ವೀರಶೈವ ಮಹಾಸಭೆ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಮೊದಲಾದ ರಾಜ್ಯಮಟ್ಟದ ಸಂಸ್ಥೆಗಳ ಮಾದರಿಯಲ್ಲಿ, ರಾಜ್ಯಾದ್ಯಂತ ಇರುವ ಪೂಜ್ಯರ ಅಭಿಮಾನಿ ಭಕ್ತರನ್ನು ಒಂದೇ ವೇದಿಕೆಗೆ ತಂದು, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಪುಟ್ಟರಾಜ ಗುರುಗಳ ಹುಟ್ಟುಹಬ್ಬ, ಭಕ್ತಿ ಸಾಹಿತ್ಯ ಸಮ್ಮೇಳನ, ಸಂಗೀತ ಶಿವಾನುಭವ, ಪೂಜ್ಯರ ಸಾಹಿತ್ಯ ಪ್ರಕಟಣೆ, ಅಂಧ ಅನಾಥರ ಸೇವೆ ಮಾಡಿಕೊಂಡು ಬರುತ್ತಿದೆ. ಈ ಸಮಿತಿಯು ದಾವಣಗೆರೆ ನಗರದಲ್ಲಿ ಭಕ್ತಿ ಸಾಹಿತ್ಯ ಸಮ್ಮೇಳನ, ಸಂಗೀತ ಶಿವಾನುಭವ, ಕಾರ್ಯಕ್ರಮವನ್ನು ಆಯೋಜಿಸಿ ತನ್ನ ಚಟುವಟಿಕೆ ಆರಂಭಿರುತ್ತದೆ. ಆದರೆ ಪೂರ್ಣ ಪ್ರಮಾಣದ ಜಿಲ್ಲಾ ಘಟಕ ಅಸ್ತಿತ್ವದಲ್ಲಿ ಇರಲಿಲ್ಲ. ಈಗ ಸಮಾನ ಮನಸ್ಕ ಪೂಜ್ಯರ ಅಭಿಮಾನಿ ಭಕ್ತರು ಸೇರಿಕೊಂಡು, ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಇರುವ ಹಾಗೆ ಜಿಲ್ಲಾ ಘಟಕ ಅಸ್ತಿತ್ವಕ್ಕೆ ತರಲು ತೀರ್ಮಾನಿಸಿ ಜಿಲ್ಲಾ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕವನ್ನು ಅಸ್ತಿತ್ವಕ್ಕೆ ತರುತ್ತಿದ್ದೇವೆ. ಈ ಘಟಕಗಳ ಉದ್ಘಾಟನೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಬಸವಪ್ರಭು ಸ್ವಾಮಿಜಿ ವಿರಕ್ತಮಠ ದಾವಣಗೆರೆ ವಹಿಸಿಕೊಳ್ಳುವರು.

ಅಧ್ಯಕ್ಷತೆಯನ್ನು ಅಣಬೇರು ಮಂಜಣ್ಣ ಗಣ್ಯವರ್ತಕರು ದಾವಣಗೆರೆ ವಹಿಸಿಕೊಳ್ಳುವರು.

ಸಮಾರಂಭದ ಉದ್ಘಾಟನೆಯನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ ಇವರು ನಡೆಸಿಕೊಡುವರು. 

- Advertisement -

ಮುಖ್ಯಾತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಶಿವಾನಂದ ಕಾಪಶಿ ಜಿಲ್ಲಾಧಿಕಾರಿಗಳು ದಾವಣಗೆರೆ,  ಅರುಣಕುಮಾರ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು, ಶ್ರೀಮತಿ ರೇಣುಕಾ ಕಮೀಷನರ, ಮಹಾ ನಗರ ಪಾಲಿಕೆ ದಾವಣಗೆರೆ, ವಿನಾಯಕ ಪೈಲ್ವಾನ್ ಪೂಜ್ಯ ಮಹಾ ಪೌರರು ಮಹಾನಗರ ಪಾಲಿಕೆ ದಾವಣಗೆರೆ ಅಥಣಿ ವೀರಣ್ಣ ಲೆಕ್ಕ ಪರಿಶೋಧಕರು ದಾವಣಗೆರೆ, ಎಸ್. ಟಿ. ವೀರೇಶ ಮಾಜಿ ಮಹಾ ಪೌರರು ಮಹಾನಗರ ಪಾಲಿಕೆ ದಾವಣಗೆರೆ ಇವರುಗಳು ಆಗಮಿಸುವರು.

ಸೇವಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಪಿ. ಚರಂತಿಮಠ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಖ್ಯಾತ ಪ್ರವಚನಕಾರರಾದ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ ಸಂಪಾದನೆ ಮಾಡಿರುವ ‘ಪುಟ್ಟರಾಜಗುರು ವಚನ ಪ್ರಭಾ’ ವಚನ ವಿಶ್ಲೇಷಣೆ ಸಂಕಲನ ಪುಸ್ತಕ ಲೋಕಾರ್ಪಣೆಯಾಗಲಿದೆ. ದಾಣಗೆರೆಯ ಆನಂದ ಆರ್. ಪಾಟೀಲ್ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಎಂ. ಕೆ. ರೇವಣಸಿದ್ಧಪ್ಪ ಸಂಗೀತ ಶಿಕ್ಷಕರ ತಂಡ ಇವರಿಂದ ಸಮೂಹ ಸಂಗೀತ, ಅಂತರಾಷ್ಟ್ರೀಯ ಮಟ್ಟದ ಭರತ ನಾಟ್ಯ ಕಲಾವಿದರಾದ ಕಲಾ ಕಲ್ಪ ಕಲಾ ಶಾಲೆ ಕು. ಸುಪ್ರೀತಿ ದಾವಣಗೆರೆ ಮತ್ತು ವಿದ್ಯಾರ್ಥಿಗಳಿಂದ ಸೋಲೊ ಮತ್ತು ಸಮೂಹ ನೃತ್ಯ ಪ್ರದರ್ಶನವಿದೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ವಿನಾಯಕ ಪಿ. ಬಿ. ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ ಧಾರವಾಡ ಇವರು ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋಶಾಧ್ಯಕ್ಷೆ ಪುಷ್ಪ ಎನ್. ಹೆಚ್, ಪ್ರಧಾನ ಕಾರ್ಯದರ್ಶಿ ಮಮತಾ ನಾಗರಾಜ್. ಸಹ ಕಾರ್ಯದರ್ಶಿ ಮಧುಮತಿ ಗಿರೀಶ್ ದೇವಿಗೆರೆ ರಾಜಶ್ರೀ ಆರ.ಎಸ್. ಸಹ ಸಂಚಾಲಕಿ ಶಶಿಕಲಾ ಎಚ್.ಎಸ್. ಕಾರ್ಯಕಾರಿಣಿ ಸದಸ್ಯೆ ಶಾನ್ವಿ ಆರ್ ಉಪಸ್ಥಿತರಿದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group