ಸಿಂದಗಿ: ಆಗಸ್ಟ್15 ರಂದು ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವೀರಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಇಡುವುದರ ಮುಖಾಂತರ ಗೌರವ ಸಲ್ಲಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷ ಪದಾಧಿಕಾರಿಗಳು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗಿರಿ ಮುಲ್ಲಾ ಮಾತನಾಡಿ, ದೇಶದ ಇತಿಹಾಸದಲ್ಲಿ ದೇಶದ ನೆಲ, ಜಲ ಸಂಪತ್ತು ಗೌರವ ಉಳಿಸಲಿಕ್ಕೆ ದೇಶದ ಸ್ವಾತಂತ್ರ್ಯಕ್ಕಾಗಿ ವೀರಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕೊಡುಗೆ ಅಪಾರವಾಗಿದೆ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಗಂಡುಗಲಿಯ ಹುಟ್ಟುಹಬ್ಬ ಅಗಷ್ಟ 15 ರಂದು ಸ್ವಾತಂತ್ರ್ಯ ದಿನದಂದೆ ಆಗಿದ್ದು ನಾವು ಸಂಗೊಳ್ಳಿ ರಾಯಣ್ಣನ ಇತಿಹಾಸವನ್ನು ತಿಳಿದುಕೊಳ್ಳಬೇಕು, ಆಗಸ್ಟ್ 15ರಂದು ಪ್ರತಿಯೊಂದು ಸರಕಾರಿ ಅರೆ ಸರಕಾರಿ, ಸಂಘ-ಸಂಸ್ಥೆಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಫೋಟೋಗೆ ಗೌರವ ಸಮರ್ಪಣೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಮಹ್ಮದ ಆಸ್ಪಾಕ ಕರ್ಜಗಿ, ಬೆಳಗಾವಿ ವಿಬಾಗದ ಉಸ್ತುವಾರಿ ರಾಜು ಗುಬ್ಬೇವಾಡ, ತಾಲೂಕು ಅಧ್ಯಕ್ಷ ರಮೇಶ್ ಐಹೊಳೆ, ರಸೂಲ್ ಆಲಮೇಲ, ಚಂದ್ರಶೇಖರ ದೆವೂರ, ಶಂಕರಲಿಂಗ ಪೂಜಾರಿ, ಮಲಕಪ್ಪ ಆಲಮೇಲ, ಶ್ರೀಕಾಂತ ದೆವೂರ, ಶರಣು ಕೊಂಡಗೂಳಿ, ದೇವೇಂದ್ರ ಕತ್ತಾಳ, ಪರಸುರಾಮ ಮೇಲಿನಮನಿ, ಇಮಾಮಸಬ ಕೊರಬು, ಭೀಮರಾಯ ದೆವೂರ, ಭೀಮರಾಯ ಸೀತಿಮನಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.