ಗುರುಗಳ ಮಾರ್ಗದರ್ಶನವಿಲ್ಲದೇ ವಿದ್ಯೆ ಕಲಿಯಲು ಸಾಧ್ಯವಿಲ್ಲ- ಮಂಜುಳಾ

Must Read

ಮೈಸೂರು – ಗುರುವಿನ ಗುಲಾಮ ಆಗುವ ತನಕ ದೊರೆಯಣ್ಣ ಮುಕುತಿ ಎಂದು ದಾರ್ಶನಕರು ಹೇಳಿದ್ದಾರೆ ಅಂದರೆ ಏನೂ ತಿಳಿಯದ ಸಾಮಾನ್ಯ ಒಬ್ಬ ಮನುಷ್ಯನಿಗೆ ಜೀವನದ ಮೌಲ್ಯಗಳನ್ನು ಜೀವನದ ಅರ್ಥ, ಗುರಿಗಳನ್ನು ಸಾಧಿಸಲು ಇರುವ ಮಾರ್ಗಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೇ ತಿಳಿಯಲು ಸಾಧ್ಯವಿಲ್ಲ ಎಂದು ವಿಶ್ರಾಂತ ಡಿಡಿಪಿಐ ಮಂಜುಳಾ ಹೇಳಿದರು.

ನಗರದ ಜೂ-೩ ರಂದು ಶ್ರೀ ಸತ್ಯಸಾಯಿ ಬಾಬಾ ಪದವಿ ಪೂರ್ವ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪೂರ್ಣಿಮಾ ಅವರು, ಮಹಾಭಾರತದಲ್ಲಿ ಅರ್ಜುನ ಒಬ್ಬ ಉತ್ತಮ ಬಿಲ್ಲು ವಿದ್ಯಾ ಪ್ರಮುಖರಾಗಲು ದ್ರೋಣಾಚಾರ್ಯರಂಥ ಗುರುಗಳೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ತ್ರಿಮೂರ್ತಿ ಅವರು ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಗುರುಗಳ ಸತತ ಸಂಪರ್ಕದಿಂದ ಸಾಧ್ಯವಿದೆ, ಜೀವನದಲ್ಲಿ ಉತ್ತಮ ನಡೆ ನುಡಿಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಗುರುವಿನ ಮಾರ್ಗದರ್ಶನ ಅವಶ್ಯವಿದೆ ಎಂದರು.

ಇದೆ ಸಂದರ್ಭದಲ್ಲಿ ಡಿಡಿಪಿಐ ಮಂಜುಳಾ, ಪ್ರಾಚಾರ್ಯ ತ್ರಿಮೂರ್ತಿಅವರನ್ನು ಹಾಸ್ಟೆಲ್ ವಾರ್ಡನ ಸಚಿನ ಬಾಗೋಜಿ ಸನ್ಮಾನಿಸಿದರು, ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಶ್ರೀ ಸತ್ಯಸಾಯಿ ಬಾಬಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಸುಷ್ಮಾ ಎಂ ವಿ, ನಿತೇಶ ಸಿ ಸಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಸಮೃದ್ಧ ಗಿರೆಣ್ಣವರ ಸ್ವಾಗತಿಸಿದರು, ಸಚಿನ ಭಾಗೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾದೇವ ಪ್ರಸಾದ ಕಾರ್ಯಕ್ರಮ ನಿರೂಪಿಸಿದರು,ರಮೇಶ ಲಂಗೋಟಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group