Homeಸುದ್ದಿಗಳುಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಸವದತ್ತಿಃ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೆ.ಎಲ್.ಇ ಸಂಸ್ಥೆ ಎಸ್.ವಿ. ಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿ ಮತ್ತು ಬಹುಭಾಷಾ ಸಂಗಮ ಸಂಸ್ಥೆ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ದಿನಾಂಕ ೨೮ ಜನವರಿ ೨೦೨೩ ರಂದು  “ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತ ಅಭಿವೃದ್ಧಿಯ ಚಿಂತನೆಗಳು” ಎಂಬ ವಿಷಯದ ಮೇಲೆ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು  ಹಮ್ಮಿಕೊಳ್ಳಲಾಗಿದೆ.

ಈ ವಿಚಾರ ಸಂಕಿರಣಕ್ಕೆ ಡಾ. ಅನಿತಾ ಕಪೂರ, ಪತ್ರಕರ್ತರು,  ಕ್ಯಾಲಿಫೋರ್ನಿಯಾ, ಅಮೇರಿಕಾ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಹರೀಶ ಅರೋರಾ, ಪ್ರಾಧ್ಯಾಪಕರು, ಪಿ.ಜಿ.ಡಿ.ಎ.ವಿ ಮಹಾವಿದ್ಯಾಲಯ, ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಕೆ.ಎಲ್.ಇ ಸಂಸ್ಥೆ ಎಸ್.ವಿ. ಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸವದತ್ತಿಯ ಪ್ರಾಚಾರ್ಯರಾದ ಪ್ರೊ. ಮಾರುತಿ ದೊಂಬರ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ವಿಚಾರ ಸಂಕಿರಣದಲ್ಲಿ ೧೩೦ ಜನ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತಾಂತ್ರಿಕ ಗೋಷ್ಠಿಗಳಲ್ಲಿ

  • ಕುವೆಂಪು ಮತ್ತು ಅವರ ಸಾಹಿತ್ಯ
  • ರವೀಂದ್ರನಾಥ ಟ್ಯಾಗೋರರ ಸಾಹಿತ್ಯದಲ್ಲಿ ಮಾನವೀಯ ದೃಷ್ಟಿಕೋನ
  • ಜಯಶಂಕರ ಪ್ರಸಾದ ಅವರ ಸಮಗ್ರ ಸಾಹಿತ್ಯ
  • ಪ್ರಸ್ತುತ ಭಾರತದ ಆರ್ಥಿಕತೆಯ ಸವಾಲುಗಳು
  • ಸಮಾಜ ವಿಜ್ಞಾನಗಳಲ್ಲಿ ಇತ್ತೀಚಿನ ಬದಲಾವಣೆಗಳು
  • ಭಾರತ ಸ್ವಾತಂತ್ರ್ಯಕ್ಕೆ ಮಹಿಳೆಯರ ಕೊಡುಗೆ
  • ಭಾರತೀಯ ಸರಕಾರ ಮತ್ತು ರಾಜಕಾರಣ
  • ಗ್ರಂಥಾಲಯ ವಿಜ್ಞಾನ
  • ಪ್ರಸ್ತುತ ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಪ್ರವೃತ್ತಿ
  • ಕ್ರೀಡೆಯಲ್ಲಿ ಪೌಷ್ಠಿಕತೆ ಮತ್ತು ಸಮತೋಲನ ಆಹಾರ

ವಿವಿಧ ವಿಷಯಗಳ ಮೇಲೆ ಪ್ರಬಂಧವನ್ನು ಮಂಡಿಸಲಿದ್ದಾರೆ ಎಂದು ಪ್ರಾಚಾರ್ಯ ಪ್ರೊ. ಮಾರುತಿ ದೊಂಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

Most Popular

error: Content is protected !!
Join WhatsApp Group