spot_img
spot_img

ಬೈಲಹೊಂಗಲದಲ್ಲಿ ಸಂಭ್ರಮದ ಒಂದು ನೂರು ವಚನೋತ್ಸವದ ವಿಜಯೋತ್ಸವ

Must Read

- Advertisement -

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವದ ವರ್ಷಾಚರಣೆ ವಚನ ಸಂಶೋಧಕ ಪಿತಾಮಹ ಫ. ಗು.ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆ ಬೆಳಗಾವಿ ಮಹಿಳಾ ಘಟಕ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ಇವರ ಆಶ್ರಯದಲ್ಲಿ 100ನೇಯ ವಚನೋತ್ಸವ ಕಾರ್ಯಕ್ರಮ ಸಂಗೊಳ್ಳಿ ರಾಯಣ್ಣ ಪುತ್ತಳಿಯ ಹತ್ತಿರ ಇರುವ ವಿದ್ಯಾ ಗಂಗಾಧರ ರಾಮಣ್ಣವರ ಇವರ ನಿವಾಸದಲ್ಲಿ  ನೆರವೇರಿತು.

ವಚನ ಘೋಷಣೆ ವಚನ ಕಟ್ಟುಗಳ ಮೆರವಣಿಗೆ ಶರಣರ ನಾಮಗಳ ಹರ್ಷೋದ್ಗಾರಗಳಿಂದ ನೆರೆದ ಶರಣ ಸಮೂಹ ಕುಣಿದು ಕುಪ್ಪಳಿಸಿತು ಶರಣ ಬಸವರಾಜ ಹುಬ್ಬಳ್ಳಿ ಅಲ್ಲಮಪ್ರಭುಗಳ ಕೈಯಲ್ಲಿ ಕಟ್ಟುವರಯ್ಯ ಕೊರಳಲ್ಲಿ ಕಟ್ಟುವರಯ್ಯ ಎಂಬ ವಚನ ಕುರಿತು ಚಿಂತನೆಗೈದರು. ಪ್ರೇಮಕ್ಕ ಅಂಗಡಿ ಒಂದು ನೂರು ದಿನಗಳ ಕಾಲ ನಿರಂತರ ಸಾಗಿ ಬಂದ ವಚನೋತ್ಸವದ ಯಶಸ್ವಿಗೆ ಕಾರಣವಾದ ಸರ್ವ ಸದಸ್ಯರನ್ನು ಅಭಿನಂದಿಸುತ್ತಾ ನವಂಬರ್ ಎರಡರಂದು ನಡೆಯುವ ಕದಳಿ ಮಹಿಳಾ ಸಮಾವೇಶಕ್ಕೆ ಕರೆ ನೀಡಿದರು.     

ವೇದಾ ವಿನಯ ರಾಮಣ್ಣವರ ಧ್ವಜಾರೋಹಣ ಮಾಡಿದರು. ರಾಮಣ್ಣವರ ಶರಣ ದಂಪತಿಗಳು ಬಸವ ಪೂಜೆ ನೆರವೇರಿಸಿದರು. ಅನುರಾಧ ಅಶ್ವಿನಿ ಬಾಗನವರ ಹಾಗೂ ಪ್ರಣತಿ ತುಳುಜನ್ನವರ ಶ್ರೇಯಾ ಪಾಟೀಲ ವಚನ ಗಾಯನ ನಡೆಸಿಕೊಟ್ಟರು ವಿದ್ಯಾ ರಾಮಣ್ಣವರ   ಸ್ವಾಗತಿಸಿದರು ಶರಣ ಶ್ರೀಶೈಲ ಶರಣಪ್ಪನವರ ಅವರನ್ನು ಸನ್ಮಾನಿಸಲಾಯಿತು ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಚಂದ್ರಣ್ಣ ಕೊಪ್ಪದ, ಮಹೇಶ ಕೋಟಗಿ, ಜಗದೀಶ್ ಭಾಗನವರ, ಸಂಗೀತಾ ರೇಶ್ಮಿ, ಶಾಂತಕ್ಕ ಹಿರೇಮಠ, ಸವಿತಾ ಶರಣಪ್ಪನವರ, ಕಲಾವತಿ ಕಡಕೋಳ, ದಾಕ್ಷಾಯಿಣಿ ಹುಬ್ಬಳ್ಳಿ, ನೂರಾರು ಹೆಣ್ಣು ಮಕ್ಕಳು ಅಕ್ಕನ ಬಳಗ ಮುಕ್ತಾಯಕ್ಕ ಹಾಗೂ ಅಜಗನ್ನ ತಾಲೂಕ ಕದಳಿ ಮಹಿಳಾ ವೇದಿಕೆಯ ಬಳಗದವರು  ನಗರದ ಶರಣ ಶರಣೆಯರು ಉಪಸ್ಥಿತರಿದ್ದರು

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group