spot_img
spot_img

ಒಂದಿಂಚೂ ಭೂಮಿ ವಕ್ಫ್ ಗೆ ಬಿಟ್ಟು ಕೊಡಲ್ಲ – ಶ್ರೀರಾಮುಲು

Must Read

spot_img
- Advertisement -

ಬೀದರ – ಯಾವ ರೈತರೂ ವಕ್ಪ್ ಬೋರ್ಡಿಗೆ ಹೆದರುವ ಅಗತ್ಯವಿಲ್ಲ. ನಾವು ಬಿಜೆಪಿಯಿಂದ ಮೂರು ತಂಡದಲ್ಲಿ ಹೋರಾಟ ಮಾಡುತ್ತಿದ್ದೇವೆ ನಮ್ಮ ರಕ್ತ ಹರಿಸುತ್ತೇವೆ ಆದರೆ ಒಂದಿಂಚು ಭೂಮಿಯನ್ನೂ ವಕ್ಫ್ ಗೆ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಗುಡುಗಿದರು.
ನಗರದ ಗಾಂಧಿ ಚೌಕದಲ್ಲಿ ವಕ್ಫ್ ವಿರುದ್ಧ ಹೋರಾಟಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಬೀದರನಲ್ಲಿ ೨೧೭ ಎಕರೆ, ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ ೫ ಎಕರೆ ವಕ್ಫ್ ಕಬಳಿಸಿದ್ದು ೩೫೦ ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಬಂದಿರುವ ಕಾರಣ ಬೋರ್ಡ್ ವಿರುದ್ಧ ಭಾರತೀಯ ಜನತಾ ಪಕ್ಷವು ಪಕ್ಷಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

  ಈ ಸಂದರ್ಭ ಸಮಾರಂಭದಲ್ಲಿ ಮಾತನಾಡಿದ ಶ್ರೀರಾಮುಲು ಸಚಿವ ಜಮೀರ ಅಹ್ಮದ ವಿರುದ್ಧ ವಾಗ್ದಾಳಿ ನಡೆಸಿದರು.

- Advertisement -

ಮೂರು ಅಡಿಯಿರುವ ಜಮೀರ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ರಾಜ್ಯದ ಮಠ ಮಂದಿರಗಳೆಲ್ಲ ವಕ್ಫ್ ಗೆ ಸೇರುತ್ತಿವೆ. ಇವನಿಗೆ ನಾವೆಲ್ಲರೂ ಬುದ್ಧಿ ಕಲಿಸೋಣ ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸೋಣ ಎಂದರು.

ಪ್ರತಿಭಟನಾ ಸಭೆಯಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟಕ್ಕೆ ವಿಜಯೇಂದ್ರ ಚಾಲನೆ ನೀಡಿದರು. ಮಾಜಿ ಉಪಮುಖ್ಯಮಂತ್ರಿ ಸಿ. ಅಶ್ವತ್ಥ ನಾರಾಯಣ, ಜನಾರ್ಧನ ರೆಡ್ಡಿ, ಭೈರತಿ ಬಸವರಾಜು ಸೇರಿದಂತೆ ಅನೇಕರು ಸಾಥ್ ನೀಡಿದರು.

ಕಾರಂಜಾ ಸಂತ್ರಸ್ಥರ ಹೋರಾಟ :
ಈ ಮಧ್ಯೆ ವಕ್ಫ್ ವಿರುದ್ಧ ಹಮ್ಮಿಕೊಂಡ ಪಾದಯಾತ್ರೆಯ ವೇಳೆ ಕಾರಂಜಾ ಸಂತ್ರಸ್ತರಿಂದ ಅರೆ ಬೆತ್ತಲೆ ಪ್ರತಿಭಟನೆ ನಡೆಯಿತು. ಸುಮಾರು ಎರಡೂವರೆ ವರ್ಷಗಳಿಂದ ತಮ್ಮ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರ ಕಿವಿಗೊಡುತ್ತಿಲ್ಲ ಅದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಸಂತ್ರಸ್ತರು ಸಿದ್ಧರಾಮಯ್ಯ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಸಚಿವ ಈಶ್ವರ ಖಂಡ್ರೆ ಹಾಗೂ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದ ಸಂತ್ರಸ್ತರು ಹೋರಾಟಗಾರರ ಮೇಲೆ ಸರ್ಕಾರ ಕೇಸು ಹಾಕುತ್ತಿದೆ ಎಂದು ಅಳಲು ತೋಡಿಕೊಂಡರು.

- Advertisement -

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಂತ್ರಸ್ತರನ್ನು ಮಾತನಾಡಿಸಿ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುವುದಾಗಿ ಆಶ್ವಾಸನೆ ನೀಡಿದರು.

ರಾಜ್ಯಾದ್ಯಂತ ಬಿಜೆಪಿ ಮೂರು ತಂಡಗಳಾಗಿ ವಕ್ಫ್ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು ಚಾಮರಾಜನಗರದಿಂದ ಆರ್ ಅಶೋಕ ಹಾಗೂ ರಾಮನಗರದಿಂದ ಪರಿಷತ್ ನಾಯಕ ಛಲವಾದಿ ನಾರಾಯಣ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸವದತ್ತಿ ಕಸಾಪ ದಿಂದ ಪರಿಷತ್ತಿನ ನಡೆ ಶಾಲೆಯ ಕಡೆ

ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಾ ಕನ್ನಡ ಸಾಹಿತ್ಯ‌ ಪರಿಷತ್ತು ವತಿಯಿಂದ "ಪರಿಷತ್ತಿನ‌ ನಡಿಗೆ ಶಾಲೆಯ‌ ಕಡೆಗೆ" ಎಂಬ ವಿನೂತನ‌ ಕಾರ್ಯಕ್ರಮವನ್ನು...
- Advertisement -

More Articles Like This

- Advertisement -
close
error: Content is protected !!
Join WhatsApp Group