ಗುರ್ಲಾಪೂರ– ಮೂಡಲಗಿ ತಾಲೂಕಿನಲ್ಲಿ ಭಕ್ತಿಗೆ ಹೆಸರುವಾಸಿಯಾದ ಗುರ್ಲಾಪೂರದಲ್ಲಿ ಶ್ರಾವಣಮಾಸದ ನಿಮಿತ್ತವಾಗಿ ಗ್ರಾಮದ ಜನತೆಗೆ ಭಕ್ತಿಯ ಚರಿತಾಮೃತದ ಅನುಭವ ಉಣಬಡಿಸಲು ಶ್ರೀ ಮಲ್ಲಿಕಾರ್ಜುನ ಸೇವಾ ಟ್ರಸ್ಟ್ ವತಿಯಿಂದ ಹಾಗು ಗ್ರಾಮಸ್ಥರ ಸಹಕಾರದಿಂದ ರಾಯಬಾಗ ತಾಲೂಕಿನ ಇಟನಾಳದ ಮೈಲಾರಲಿಂಗೇಶ್ವರ ದೇವಸ್ಥಾನದ ಶ್ರೀ ಸಿದ್ಧೇಶ್ವರ ಆಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ದಿ.29/6/2022 ರಿಂದ ಶುಕ್ರವಾರ ದಿ.26/8/2022 ರವರಿಗೆ ಸಂಜೆ 8 ಗಂಟೆಯಿಂದ 9 ಗಂಟೆಯವರೆಗೆ ತಮ್ಮ ಪ್ರವಚನ ನುಡಿಯಲ್ಲಿ ದಾನ ಧರ್ಮ ಭಕ್ತಿ ಸಮಾಜಕ್ಕೆ ನಾವು ಮಾಡುವ ಕಾರ್ಯ ಇನ್ನು ಹಲವಾರು ಜ್ಞಾನದ ನುಡಿಗಳನ್ನುನಾಡುವರು ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಶ್ರಿಗಳ ನುಡಿ ಆಲಿಸಿ ಜೀವನ ಪಾವನ ಮಾಡಿಕೂಳ್ಳಬೇಕು ಒಂದು ತಿಂಗಳವರೆಗೆ ಸಂಜೆ 7 ರಿಂದ 8 ಗಂಟೆ ವರೆಗೆ ಭಜನಾ ಮಂಡಳಿ ವತಿಯಿಂದ ಭಕ್ತಿಯ ಭಜನಾ ಕಾರ್ಯಕ್ರಮ ನಡೆಯುವದು ಎಂದು ಜಯಪ್ರಕಾಶ ಗಾಣಿಗೇರ ತಿಳಿಸಿರುತ್ತಾರೆ.
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...