ಸವದತ್ತಿಃ “ಸಾಧನೆಗೆ ದೃಢವಾದ ಮನಸ್ಸು, ಛಲ ಇರಬೇಕು.ಇವೆರಡೂ ಇದ್ದರೆ ಏನು ಬೇಕಾದರೂ ಸಾಧಿಸಬಹುದಾಗಿದೆ.ವಿಕಲತೆ ಹೊಂದಿದವರು ತಮ್ಮನ್ನು ಅಸಹಾಯಕರು ಎಂದು ತಿಳಿಯದೇ ಅವರಿಗೂ ವಿಶೇಷ ಶಿಕ್ಷಣವಿದೆ.ಸಮನ್ವಯ ಶಿಕ್ಷಣದ ಮೂಲಕ ಅವರೂ ಕೂಡ ತಮ್ಮ ಪ್ರತಿಭೆ ಮೂಲಕ ವಿಭಿನ್ನ ಸಾಧನೆ ಮಾಡಬಹುದಾಗಿದೆ. ಈ ದಿಸೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಇಂದು ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಜರುಗಿಸುತ್ತಿದ್ದು ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ರಾಜಕೀಯ, ಸಾಮಾಜಿಕ ಆರ್ಥಿಕ, ಶೈಕ್ಷಣಿಕ,ಮಾಹಿತಿ ತಂತ್ರಜ್ಞಾನ, ಮನೋರಂಜನೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತಾಗಿದೆ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ತಿಳಿಸಿದರು.
ಅವರು ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ವಿಶ್ವವಿಕಲಚೇತನದ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ, ರತ್ನಾ ಸೇತಸನದಿ, ಬಿ.ಐ.ಇ.ಆರ್.ಟಿ.ಗಳಾದ ಎಸ್.ಬಿ.ಬೆಟ್ಟದ, ಸಿ.ವ್ಹಿ.ಬಾರ್ಕಿ, ವೈ.ಬಿ.ಕಡಕೋಳ, ಡಿ.ಎಲ್.ಭಜಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ವಿಕಲಚೇತನ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡುತ್ತ, ವಿಕಲಚೇತನ ಮಕ್ಕಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಜೊತೆಗೆ ವಿಶ್ವ ವಿಕಲಚೇತನರ ದಿನದ ಮಹತ್ವವನ್ನು ತಿಳಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಕ್ಕಳು ಮತ್ತು ಪಾಲಕರಿಗಾಗಿ ಚಿತ್ರಕಲೆ, ಆಶುಭಾಷಣ, ಲಿಂಬು ಚಮಚ, ಸಂಗೀತ ಕುರ್ಚಿ, ಛದ್ಮವೇಷ, ಗಾಯನ ಸ್ಪರ್ಧೆ, ಏಕ ಪಾತ್ರಾಭಿನಯ, ಮಡಕೆ ಒಡೆಯುವುದು, ಕೆರೆ ಮತ್ತು ದಡ, ಕಪ್ಪೆ ಓಟ, ನೂರು ಮೀಟರ್ ಓಟ ಮೊದಲಾದ ಸ್ಪರ್ಧೆಗಳನ್ನು ಜರುಗಿಸಲಾಯಿತು.
ಬಿ.ಆರ್.ಸಿಯ ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ, ಮಲ್ಲಿಕಾರ್ಜುನ ಹೂಲಿ, ಜೆ.ಎಸ್.ಸಿದ್ಲಿಂಗನವರ, ಈರಪ್ಪ ಅವರಾದಿ, ನಿರ್ಣಾಯಕರಾದ ಸಿ.ಎನ್.ಹಿರೇಮಠ, ಎಸ್.ಎಸ್.ತೊರಗಲ್, ಆರ್.ಎಸ್.ಹೆಬಸೂರ, ಎಸ್.ವ್ಹಿ.ಖೋತ, ಡಿ.ಆರ್.ಮೆಣಸಿನಕಾಯಿ, ಎಸ್.ಎಂ.ಅಂಗಡಿ, ಸುರೇಶ.ಜಾಧವ, ಎಂ.ಎಸ್.ಕೊಳ್ಳಿ, ಐ.ಎಸ್.ಕಮ್ಮಾರ, ಶಾಲಾ ಸಿದ್ಧತಾ ಕೇಂದ್ರದ ಶಶಿಕಲಾ ಕೊಡ್ಲಿಮಠ, ಶಿಕ್ಷಕರಾದ ಆರ್.ಎಸ್.ಕುರಿ ಸೇರಿದಂತೆ ವಿವಿಧ ಭಾಗಗಳಿಂದ ಪಾಲಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಪ್ರಥಮ, ದ್ವಿತಿಯ, ತೃತೀಯ ಬಹುಮಾನಗಳನ್ನು ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ ಪ್ರಾಯೋಜಕತ್ವದಲ್ಲಿ ನೀಡಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಪ್ರಾರ್ಥನಾ ಗೀತೆ ಹೇಳಿದರು. ವೈ.ಬಿ.ಕಡಕೋಳ ಸ್ವಾಗತಿಸಿದರು. ಎಸ್.ಬಿ.ಬೆಟ್ಟದ ನಿರೂಪಿಸಿದರು. ಸಿ.ವ್ಹಿ.ಬಾರ್ಕಿ ವಂದಿಸಿದರು.