ಅರಿವು ಯುವ ಕೇಂದ್ರ ಉದ್ಘಾಟನೆ; ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ

Must Read

ಬಸವನಬಾಗೇವಾಡಿ: ಜನೇವರಿ 12 ರ ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಮಧ್ಯಾಹ್ನ 3 ಗಂಟೆಗೆ, ಸ್ಥಳೀಯ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗುವ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ “ಅರಿವು ಯುವ ಕೇಂದ್ರ,(ರಿ)” ಉದ್ಘಾಟನೆಗೊಳ್ಳಲಿದೆ. ಸಾಂಸ್ಕೃತಿಕ ಮತ್ತು ಬೌದ್ಧಿಕ ಸಂಸ್ಥೆಯಾಗಿ ನಾಡಿನಲ್ಲಿ ಸೇವೆಗೈಯಲಿದೆ.

ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಯ ಈ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ಶ್ರೀ. ಮ. ನಿ. ಪ್ರ ಸಿದ್ಧಲಿಂಗಮಹಾಸ್ವಾಮಿಗಳು, ವಿರಕ್ತಮಠ ಬಸವನಬಾಗೇವಾಡಿ. ಕಾರ್ಯಕ್ರಮ ಉದ್ಘಾಟನೆಯನ್ನು ಸಂಗಮೇಶ ಪೂಜಾರಿ(ಸದಸ್ಯರು,ಪುಸ್ತಕ ಪ್ರಾಧಿಕಾರ ,ಬೆಂಗಳೂರು ಹಾಗೂ ಸಿಂಡಿಕೇಟ್ ಸದಸ್ಯರು,ಕಲಬುರ್ಗಿ ವಿ ವಿ ಗುಲಬರ್ಗಾ) ಮುಖ್ಯಅಥಿಗಳಾಗಿ, ಶ್ರೀ. ಪಿ. ಎಂ. ದೋರನಳ್ಳಿ(ಪೊಲೀಸ್ ಉಪ ನಿರೀಕ್ಷಕರು ಸಶಸ್ತ್ರ, ಬಾಗಲಕೋಟೆ). ಅಧ್ಯಕ್ಷತೆ ಎನ್. ಎಸ್. ಹೂಗಾರ (ಸಂಸ್ಥಾಪಕ ಅಧ್ಯಕ್ಷರು,ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ,) ಅತಿಥಿಗಳಾಗಿ ಕಾಶೀನಾಥ್ ಅವಟಿ(ಮಾರ್ಗದರ್ಶಕರು ಅರಿವು ಯುವ ಕೇಂದ್ರ) ಪ್ರಭಾಕರ ಖೇಡದ(ಮಾರ್ಗದರ್ಶಕರು ಅರಿವು ಯುವ ಕೇಂದ್ರ) ಉಪಸ್ಥಿತಿ ಕು. ಸಂಗಮೇಶ ಬಾಗೇವಾಡಿ(ಅಧ್ಯಕ್ಷರು ಅರಿವು ಯುವ ಕೇಂದ್ರ)ಇವರು ಇರಲಿದ್ದಾರೆ.

ಜೊತೆಗೆ ಕು.ಶ್ರವಣ ಆಲೂರ ಹಾಗೂ ಈಶ್ವರ ಹಳ್ಳಿ ಸ್ನೇಹಿತರು ರೂಪಿಸಿದ ಮಹಾನ್ ವ್ಯಕ್ತಿಗಳ ಪ್ರತಿಮೆಗಳ ಮತ್ತು ಚಿತ್ರಕಲಾ “ಕಲಾ ಪ್ರದರ್ಶನ” ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಜ್ಞಾನ ಭಾರತಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಇರಲಿದೆ ಎಂದು ಅರಿವು ಯುವ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಕು.ಬಸವರಾಜ ಹಡಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group