ಮೂಡಲಗಿ : ಡಾ|| ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿ ಬಳಗ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಮಾ.17ರಂದು ನೇತ್ರದಾನ ಹಾಗೂ ಅಂಗಾಂಗದಾನದ ಹೆಸರು ನೋಂದಣಿ ಶಿಬಿರ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಲಿದೆ.
ಸಿದ್ದ ಸಂಸ್ಥಾನ ಮಠ ಮೂಡಲಗಿಯ ಪೀಠಾಧಿಪತಿಗಳಾದ ಶ್ರೀ ದತಾತ್ರೇಯಬೋಧ ಸ್ವಾಮೀಜಿ, ಶ್ರೀ ಶ್ರೀಧರಬೋಧ ಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸುವರು, ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಮುಖ್ಯ ಅಥಿತಿಗಳಾಗಿ ತಹಶೀಲ್ದಾರ ಡಿ ಜಿ ಮಹಾತ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನ್ನವರ, ಬಿಇಒ ಅಜೀತ ಮನ್ನಿಕೇರಿ, ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಸಿಡಿಪಿಒ ವಾಯ್ ಕೆ ಗದಾಡಿ, ವೈದ್ಯಾಧಿಕಾರಿ ಭಾರತಿ ಕೋಣಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಹಾಲಪ್ಪ ಬಾಲದಂಡಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಭಾಗವಹಿಸುವವರು.
ನೇತ್ರದಾನ ಹಾಗೂ ಅಂಗಾಂಗದಾನ ಮಾಡುವ ವ್ಯಕ್ತಿಗಳು ತಮ್ಮ ಒಂದು ಪೋಟೋ, ಆಧಾರ ಕಾರ್ಡ, ಮೊಬೈಲ ನಂಬರ ಕಡ್ಡಾಯವಾಗಿ ತರಲೇಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೋ: 9590718444, 9008846822, 9448636261, 9739298511, 9900161212, 9008324785 ಸಂಖ್ಯೆಗಳಿಗೆ ಸಂರ್ಪಕಿಸಬಹುದೆಂದು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.