ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ – ಶ್ರೀಧರಬೋಧ ಸ್ವಾಮೀಜಿ

Must Read

ಮೂಡಲಗಿ: ‘ರೈತರು ಕೃಷಿಯನ್ನು ಕೌಶಲ್ಯದಿಂದ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ ಎಂದು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮೀಜಿ ಹೇಳಿದರು.

ಇಲ್ಲಿಯ ಶಿವಬೋಧರಂಗ ಮಠದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಏರ‍್ಪಡಿಸಿದ್ದ ಸಾವಯವ ಕೃಷಿ ಕುರಿತು ವಿಚಾರ ಸಂಕಿರಣ ಕಾರ‍್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ರೈತರು ರಾಸಾಯನಿಕ ಗೊಬ್ಬರವನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡುತ್ತಿದ್ದು, ಆಹಾರವನ್ನು ವಿಷಕಾರಿ ಮಾಡುತ್ತಿದ್ದಾರೆ. ಆರೋಗ್ಯ ಪೂರ‍್ಣವಾದ ಸಮಾಜ ನಿರ‍್ಮಿಸಲು ಸಾವಯವ ಕೃಷಿಯೊಂದೆ ದಾರಿ ಎಂದರು.

ಮುಖ್ಯ ಅತಿಥಿ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ ಕುಂಬಾರ ಮಾತನಾಡಿ ‘ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಬೇರೆಯವರಿಗೆ ಕೊಟ್ಟು ಪರಾವಲಂಬಿಗಳಾಗುತ್ತಿದ್ದು, ತಾವು ಬೆಳೆದ ಬೆಳೆಗಳನ್ನು ಮೌಲ್ಯವರ‍್ಧನೆಗೊಳಿಸುವ ಮೂಲಕ ಉತ್ತಮ ಆದಾಯ ಪಡೆಯಬಹುದಾಗಿದೆ’ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಕಲ್ಲೋಳಿಯ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರಮೇಶ ಖಾನಗೌಡ್ರ ಮಾತನಾಡಿ, ನಾಟಿ ಮಾಡುವ ಪೂರ‍್ವದಲ್ಲಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ ಕೊರತೆಯಿರುವ ಲವಣಾಂಶಗಳನ್ನು ಮಾತ್ರ ಹಾಕಬೇಕು. ಸಾಯವ ಕೃಷಿಗೆ ತಾಳ್ಮೆ ಶ್ರದ್ಧೆ ಮತ್ತು ಪ್ರಾಮಾಣಿಕ ಕಾರ‍್ಯ ಮಾಡಿದರೆ ಖಂಡಿತ ಯಶಸ್ಸು ದೊರೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಪರಿವಾದ ಅಧ್ಯಕ್ಷ ಸಂಜಯ ಮೋಕಾಶಿ ಪ್ರಾಸ್ತಾವಿಕ ಮಾತನಾಡಿದರು.
ಸಾವಯವದಲ್ಲಿ ಬೆಳೆದ ಅರಿಷಿನ ಪುಡಿ, ಬೆಲ್ಲದ ಚಕ್ಕಿ, ಕರಿಬೇವು, ಆಕಳ ಸೆಗಣಿಯ ಊದುಬತ್ತಿ ಇವನ್ನು ಪ್ರದರ‍್ಶಿಸಿದರು.

ಮೂಡಲಗಿ ಸೇರಿದಂತೆ ನಾಗನೂರ, ಗುರ‍್ಲಾಪುರ, ಕಮಲದಿನ್ನಿ, ರಂಗಾಪುರ, ಪಟಗುಂದಿ ಗ್ರಾಮಗಳ ರೈತರು ಭಾಗವಹಿಸಿದ್ದರು.

ವೆಂಕಟೇಶ ಸೋನವಾಲಕರ, ಕೃಷ್ಣಾ ಕೆಂಪಸತ್ತಿ, ಮಲ್ಲಿಕಾರ‍್ಜುನ ಸಸಾಲಟ್ಟಿ, ಸುರೇಶ ದೇಸಾಯಿ, ಡಾ. ಸಂಜಯ ಶಿಂಧಿಹಟ್ಟಿ, ಡಾ. ಎಸ್.ಎಸ್.ಪಾಟೀಲ ಮಹಾಂತೇಶ ಹೊಸೂರ ಇದ್ದರು.
ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group