ಮುನವಳ್ಳಿ: “ವೈದ್ಯ ವೃತ್ತಿ ನಮ್ಮ ಜೀವನದಲ್ಲಿ ಸಂಜೀವಿನಿ ಇದ್ದಂತೆ ಅವರ ಮಾತುಗಳು ರೋಗಿಗಳ ದೈಹಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ.ವೈದ್ಯರು ರೋಗಿಗಳ ಮಾನಸಿಕತೆಯನ್ನು ಚಿಕಿತ್ಸಕ ರೂಪದ ಜೊತೆಗೆ ದೈರ್ಯ ನೀಡುವಂತಿದ್ದರೆ ಅರ್ಧ ಕಾಯಿಲೆ ವಾಸಿಯಾದಂತೆ ಹಿಂದಿನ ಕಾಲದಲ್ಲಿ ನಾಡಿಮಿಡಿತದ ಮೇಲೆ ರೋಗಿಗಳ ರೋಗವನ್ನು ಪತ್ತೆ ಮಾಡುವ ಜೊತೆಗೆ ಆಯುರ್ವೇದ ಪದ್ದತಿಯ ಮೂಲಕ ಚಿಕಿತ್ಸೆ ನೀಡುವ ಪದ್ದತಿ ಇತ್ತು ಇಂದು ವಿಜ್ಞಾನ ಮುಂದುವರೆದು ವಿಭಿನ್ನ ರೀತಿಯ ತಪಾಸಣೆಗಳು ಜರಗುತ್ತಿವೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.ನಮ್ಮ ಆಹಾರ,ನಮ್ಮ ವಿಚಾರ,ಮತ್ತು ನಮ್ಮ ಇರುವಿಕೆ ನಮ್ಮ ಶಾರೀರಿಕ ಆರೋಗ್ಯವನ್ನು ರೂಪಿಸುವುದು.ಈ ದಿಸೆಯಲ್ಲಿ ನಮ್ಮ ದೈನಂದಿನ ಜೀವನ ಕೂಡ ಇದ್ದರೆ ಸದೃಡ ಮನಸ್ಸಿನಲ್ಲಿ ಸದೃಡ ಆರೋಗ್ಯ ಎಂಬ ಮಾತು ನಮ್ಮೊಂದಿಗೆ ಇರುವುದರಲ್ಲಿ ಸಂಶಯವಿಲ್ಲ.ಇಂದು ಜರಗುತ್ತಿರುವ ಉಚಿತ ತಪಾಸಣೆ ನಿಜಕ್ಕೂ ಒಳ್ಳೆಯ ಕಾರ್ಯ.ವೈದ್ಯರು ರೋಗಿಗಳಿಗೆ ಉಪಚಾರದ ಮಹತ್ವ ತಿಳಿಸುವ ಮೂಲಕ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಸೂಕ್ತ ಪರಿಹಾರೋಪಾಯಗಳನ್ನು ನೀಡಿರಿ” ಎಂದು ಸಿಂದೋಗಿಯ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಮಹಾಸ್ವಾಮಿಗಳು ತಿಳಿಸದರು.
ಅವರು ಮುನವಳ್ಳಿ ಪಟ್ಟಣದ ಗಾಂಧಿನಗರದ ಶ್ರೀ ಹನುಮಾನ್ ಮಂದಿರದ ಸಭಾಂಗಣದಲ್ಲಿ ಜೈಂಟ್ಸ ಗ್ರುಪ್ ಆಪ್ ರಾಣಿ ಚನ್ನಮ್ಮ ಸಹೇಲಿ ಮುನವಳ್ಳಿ ಹಾಗೂ ಶ್ರೀ ಶಿವಸಂಜೀವಿನಿ ಸೇವಾ ಪೌಂಡೇಶನ್ (ರಿ) ಸವದತ್ತಿ ಇವರ ಸಹಯೋಗದಲ್ಲಿ ಜರುಗಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ ಬಾಳಿ. ಜೈಂಟ್ಸ ಗ್ರುಪ್ ಆಪ್ ರಾಣಿ ಚನ್ನಮ್ಮ ಸಹೇಲಿ ಮುನವಳ್ಳಿ ಅಧ್ಯಕ್ಷರಾದ ಮಧುಮತಿ ಕಲಾಲ.ಫೆಡರೇಶನ್ ೦೬ ಜೈಂಟ್ಸ ವೆಲ್ಪೇರ್ ನ ಯುನಿಟ್ ಡೈರಕ್ಟರ ಅನೀಲ ಕಿತ್ತೂರ. ಜೈಂಟ್ಸ ಗ್ರುಪ್ ಮುನವಳ್ಳಿ ಅಧ್ಯಕ್ಷರಾದ ಶಿವಾಜಿ ಮಾನೆ.ಶಿವಸಂಜೀವಿನಿ ನೇತ್ರಾಲಯ ಸವದತ್ತಿ ಡಾ.ಸವಿತಾ ಸಬನೀಸ್.ಮಧುಮೇಹ ತಜ್ಞರಾದ ಡಾ.ಶ್ರೀಪಾದ ಸಬನೀಸ್.ಶಿಶು ತಜ್ಞರಾದ ಡಾ,ಮಂಜುನಾಥ ಬಸರಗಿ.ಎಲವು ಕೀಲು ತಜ್ಞರಾದ ಡಾ.ಮಂಜುನಾಥ ಬಾರಕೇರ.ನಿರ್ಮಲಾ ಗದ್ವಾಲ್. ಅನ್ನಪೂರ್ಣ ಲಂಬೂನವರ.ಡಾ.ಕೃತ್ತಿಕಾ ಕಲಾಲ ಸೇರಿದಂತೆ ಜೈಂಟ್ಸ ಗ್ರುಪ್ ಹಾಗೂ ಶಿವ ಸಂಜೀವಿನಿ ಪೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಮೇಶ ಬಾಳಿ ಮಾತನಾಡುತ್ತ “ ಈ ಹಿಂದೆ ಲಯನ್ಸ ಕ್ಲಬ್ ಮುನವಳ್ಳಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು. ತಾವು ಕೂಡ ತಮ್ಮ ಹುಟ್ಟು ಹಬ್ಬವನ್ನು ಕೆ.ಎಲ್.ಇ. ಸಂಸ್ಥೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿಸುತ್ತ ಬಂದಿರುವುದನ್ನು ನೆನೆಯುತ್ತ ಇಂದು ಮಹಿಳೆಯರು ರಾಣಿ ಚನ್ನಮ್ಮ ಸಹೇಲಿ ಸಂಘಟನೆ ವತಿಯಿಂದ ಈ ಕಾರ್ಯಕ್ರಮ ಜರುಗಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಡಾ.ಸವಿತಾ ಸಬನೀಸ ಮಾತನಾಡಿ “ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಾಳಜಿ ವಹಿಸುವುದು ಸೂಕ್ತ.ಇಂದು ಉಚಿತ ತಪಾಸಣೆ ಶಿಬಿರದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಕುರಿತು ಶಿವ ಸಂಜೀವಿನಿ ಸಂಘಟನೆ ಚಿಕಿತ್ಸೆ ಕೂಡ ಭರಿಸುವ ಮೂಲಕ ಈ ಕಾರ್ಯವನ್ನು ನಡೆಸುತ್ತಿದ್ದು ಶಿವ ಸಂಜೀವಿನಿ ಸಂಘಟನೆ ಜರುಗಿಸುತ್ತ ಬಂದಿರುವ ಉಚಿತ ಆರೋಗ್ಯ ತಪಾಸಣೆಯ ಮಹತ್ವವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ಕನ್ನಡ ರಾಜ್ಯೋತ್ಸವ ಗೌರವಕ್ಕೆ ಪಾತ್ರರಾದ ವೈ.ಬಿ.ಕಡಕೋಳ.ಬಾಳು ಹೊಸಮನಿ. ಪುನೀತ್ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಎಸ್.ಬಿ.ಹಿರಲಿಂಗನ್ನವರ.ಛಾಯಾಗ್ರಾಹಕ ಹಾಗೂ ಮಾಧ್ಯಮ ಪ್ರತಿನಿಧಿ ಪ್ರಶಾಂತ ತುಳಜನ್ನವರ.ಮೋಹನ ಸರ್ವಿ,ತಾನಾಜಿರಾವ್ ಮುರಂಕರ.ಶಿವಾಜಿ ಮಾನೆ.ಅನೀಲ ಕಿತ್ತೂರ.ಉಮೇಶ ಬಾಳಿ.ಡಾ,ಸವಿತಾ ಸಬನೀಸ್. ಡಾ.ಶ್ರೀಪಾದ ಸಬನೀಸ್. ಡಾ.ಮಂಜುನಾಥ ಬಾರಕೇರ್.ಮೊದಲಾದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುರುಮಾತೆ ವ್ಹಿ.ಎಸ್.ಹರಿಹರ ಕಾರ್ಯಕ್ರಮ ನಿರೂಪಿಸಿದರು.ಸುಮಾ ರೇಣಕೆ ಪ್ರಾರ್ಥನಾ ಗೀತೆ ಹಾಡಿದರು.ಅನ್ನಪೂರ್ಣ ಲಂಬೂನವರ ಸ್ವಾಗತಿಸಿದರು.ರಾಧಾ ಕುಲಕರ್ಣಿ ವಂದಿಸಿದರು.