ಸ್ವಾಮಿ ಸಿಂಪನಿ ಪ್ರಕಾಶನ ಬೆಂಗಳೂರು .ವಿಶ್ವಜ್ಯೋತಿ ನರ್ಸಿಂಗ್ ಹೋಮ್ , ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಘಟಕ ಬೈಲಹೊಂಗಲ ಇದರ ಸಂಯುಕ್ತ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶ್ರೀಮತಿ ಶೈಲಜಾ ವಿ.ಕೆ ನಿವೃತ್ತಿ ಜಂಟಿ ನಿರ್ದೇಶಕರು ಪದವಿ ಕಾಲೇಜು ತಾಂತ್ರಿಕ ಶಿಕ್ಷಣ ವಿಭಾಗ ಇವರು ಬರೆದಿರುವ ಆತ್ಮಕಥೆ ಬಾಳ ಬೆಳಕು ,ಕೃತಿಯನ್ನು ತಾಲೂಕಿನ ಎಲ್ಲಾ ಶಾಲೆಗಳಿಗೆ ಉಚಿತವಾಗಿ ನಿಡುವ ಸರಳ ಕಾರ್ಯಕ್ರಮ ನಗರದ ಬಿ ಆರ್ ಸಿ.ಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ ಎನ್ ಪ್ಯಾಟಿ ಅವರು ವಹಿಸಿದ್ದರು. ಪ್ರಕಾಶಕರು ಶ್ರೀಮತಿ ಜ್ಯೋತಿ ಸಿಂದೋಳಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಶಯ ನುಡಿಗಳನ್ನು ಸಿದ್ದು ನೇಸರಗಿ ಆಡಿದರು ಮತ್ತು ಪುಸ್ತಕ ಪರಿಚಯ ಮಾಡಿದರು. ಪತ್ರಕರ್ತರಾದ ಮಹಾಂತೇಶ ರಾಜಗೋಳಿ ಮತ್ತು ನಾಗೇಶ ನರಸಾಪೂರ ಇವರು ಅತಿಥಿಗಳಾಗಿ ಆಗಮಿಸಿದ್ದರು.
ತಾಲೂಕಿನ ಅನುಷ್ಠಾನಾಧಿಕಾರಿಗಳ ಸಿಆರ್ಪಿ.ಬಿಆರ್ಪಿ. ಹಾಗೂ ಐ.ಇ.ಆರ್.ಟಿ.ಇ.ಸಿ.ಓ ಮತ್ತು ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಸುಮಾರು 63,000 ಮೌಲ್ಯದ 252 ಪುಸ್ತಕಗಳನ್ನು ತಾಲೂಕಿನ ಎಲ್ಲಾ ಶಾಲೆಗಳಿಗೆ ನೀಡಲು ಸಾಂಕೇತಿಕವಾಗಿ ಶಾಲಾ ಸಂಖ್ಯೆಗೆ ಅನುಗುಣವಾಗಿ ಇಂದು ಬಿ.ಇ.ಓ ರವರಿಗೆ ಹಸ್ತಾಂತರ ಮಾಡಲಾಯಿತು.
ಸಂಪನ್ಮೂಲ ಶಿಕ್ಷಕರ ಸಿದ್ದು ನೇಸರ್ಗಿ “ಬಾಳ ಬೆಳಕು” ಕೃತಿ ಪರಿಚಯ ಮಾಡುವುದರೊಂದಿಗೆ ಇದರಲ್ಲಿ ಲೇಖಕರಾದ ಶ್ರೀಮತಿ ಶೈಲಜಾ ವಿ.ಕೆ. ಅವರು ತಾನು ಲೇಖಕಿ ಅಲ್ಲ ಎನ್ನುತ್ತ ಆತ್ಮ ಕಥೆ ಕೃತಿಯನ್ನು ತಮ್ಮ ಜೀವನದ ಅನುಭವಗಳನ್ನು ಅದಲ್ಲೂ ಉದ್ಯೋಗಿಯ ಸರಕಾರಿ ಮಹಿಳಾ ಉದ್ಯೋಗಿ ಯಶೋಗಾಥೆ ಚೆನ್ನಾಗಿ ಬರೆದಿದ್ದಾರೆ .ಪ್ರಧಾನಮಂತ್ರಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಪ್ರಭಾವದಿಂದ ಬರೆಯಲು ಪ್ರಾರಂಭ ಮಾಡಿ, ಲಾಕ್ ಡೌನ ದಲ್ಲಿ ಮೊಮ್ಮಕ್ಕಳಿಗೆ ಹೇಳಿದ ಕಥೆ, ಪ್ರವಾಸ ಅನುಭವ, ತಮ್ಮ ಉದ್ಯೋಗ ಸಿಹಿ ಕಹಿ ಅನುಭವ ಇದರಲ್ಲಿ ಚಿತ್ರಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್ ಆರ್ ಠಕಾಯಿ ಯವರು ಪುಸ್ತಕದ ಮುಖಪುಟದ ಮೇಲಿರುವ ನೇಸರ ನಮಗೆ ಬಹಳ ಬೆಳಕನ್ನು ನೀಡುತ್ತಿದೆ. ಅದೇ ರೀತಿ ಬಾಳ ಬೆಳಕು ಕೃತಿ ಓದುಗರಿಗೆ ಖುಷಿ ನೀಡುತ್ತದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿದ ನಮ್ಮ ತಾಲೂಕಿನ ಎಲ್ಲ ಶಾಲೆಗಳಿಗೆ ಉಚಿತ ಪ್ರತಿ ಗ್ರಂಥಾಲಯಕ್ಕಾಗಿ ನೀಡಿದ್ದು ಇವುಗಳನ್ನು ಸಂತೋಷದಿಂದ ಸ್ವೀಕರಿಸಿ ಶಾಲೆಗೆ ಇಂದೆ ಹಂಚಿಕೆ ಮಾಡಲಾಗುವದು ಎಂದರು.
ಕಚೇರಿ ಅಧೀಕ್ಷಕರು ನಾಗೇಶ ಕೃತಿಯನ್ನು ಓದಿದ ಅನುಭವ ಹಂಚಿಕೊಂಡರು. ಕಾರ್ಯಕ್ರಮವನ್ನು ಶಿಕ್ಷಕರು ಮತ್ತು ಸ್ಕೌಟ ತಾಲೂಕ ಕಾರ್ಯದರ್ಶಿ ಅಜ್ಜಪ್ಪ ಅಂಗಡಿಯವರು ನಿರೂಪಿಸಿದರು. ರಾಜು ಹಕ್ಕಿ ಎಲ್ಲರನ್ನ ಸ್ವಾಗತಿಸಿದರು. ಪುಷ್ಪ ಶಿಂತ್ರಿ ವಂದನೆಗಳನ್ನು ಸಲ್ಲಿಸಿದರು.