ಚಿತ್ತರಗಿಯಲ್ಲಿ ಸಂಭ್ರಮದಿಂದ ಜರುಗಿದ ಅಡ್ಡ ಪಲ್ಲಕ್ಕಿ ಉತ್ಸವ

Must Read

ತಿಮ್ಮಾಪುರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯ ಮಹಾಂತೇಶ್ವರ ಶಿವಯೋಗಿಗಳವರ ಜಾತ್ರೆಯ ಅಂಗವಾಗಿ ದಿ. ೧೫ ರಂದು ಶುಕ್ರವಾರ ಗೌರಿ ಹುಣ್ಣಿಮೆಯಂದು ಅಡ್ಡ ಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಡಗರದಿಂದ ಜರುಗಿತು

ಅಂದು ಮುಂಜಾನೆ 12ಕ್ಕೆ ಶ್ರೀಮಠ ದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀಮಠ ತಲುಪಿದ್ದು ಸಾಯಂಕಾಲ ಆರು ಗಂಟೆಗೆ ಅಡ್ಡ ಪಲ್ಲಕ್ಕಿಯಲ್ಲಿ ವಿಜಯ ಮಹಾಂತ ಶಿವಯೋಗಿಗಳ ಅವರ ಬೆಳ್ಳಿ ಮೂರ್ತಿ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರ ಇಡಲಾಗಿತ್ತು ಮಾರ್ಗದುದ್ದಕ್ಕೂ ಸಾವಿರಾರು ಭಕ್ತರು ಹೂ ಹಣ್ಣು ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು ವಿಜೃಂಭಣೆಯಿಂದ ನಡೆದ ಅಡ್ಡ ಪಲ್ಲಕ್ಕಿ ಮಹೋತ್ಸವ ನಾಡಿನ ವಿವಿಧ ಸಾಂಸ್ಕೃತಿಕ ಮೇಳಗಳು ಪ್ರಮುಖ ಆಕರ್ಷಣೆಗಳಾಗಿದ್ದವು ಈ ಅಡ್ಡ ಪಲ್ಲಕ್ಕಿ ಮಹೋತ್ಸವದಲ್ಲಿ ಮ್ಯೂಸಿಕಲ್ ತಂಡ ವಚನ ಶರಣ ಶರಣೆಯರ ಬಾವ ಗೀತೆಗಳ ಹಾಡುಗಾರಿಕೆ ಬ್ಯಾಂಡ್ ಸೆಟ್ ಕರಡಿ ಮಜಲು ಡೊಳ್ಳಿನ ಮೇಳಗಳು ವಿವಿಧ ಭಜನಾ ತಂಡಗಳು ಭಾಗವಹಿಸಿ ಸೇರಿದ ಲಕ್ಷಾಂತರ ಭಕ್ತರ ಮನವನ್ನು ರಂಜಿಸಿದವು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group