ಸಿಂದಗಿ: ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಹಾಗೂ ಸಂಸ್ಕಾರ ಸಂಸ್ಕೃತಿ ಆಚಾರ- ವಿಚಾರ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ತಂದೆ-ತಾಯಿ ಹಾಗೂ ಶಿಕ್ಷಕರ ಪಾತ್ರ ದೊಡ್ಡದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಮಹಾ ಶಿವಯೋಗಿಗಳ 83 ನೇ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಎಮ್ಮಿಗನೂರು ಜಡೆಸಿದ್ದೇಶ್ವರ ಮಹಾ ಶಿವಯೋಗಿಗಳ ಪುರಾಣ ಪ್ರವಚನದಲ್ಲಿ ಅವರು ಭಾಗವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಆಚಾರ- ವಿಚಾರ ಸಂಸ್ಕಾರಗಳನ್ನು ನೀಡುವ ಗುಣಗಳು ಅವರ ಜೀವನದಲ್ಲಿ ರೂಡಿಸುವಂತೆ ಹೆಚ್ಚು ಪ್ರೇರಣೆಯ ಮಾತುಗಳು ಮಕ್ಕಳಿಗೆ ತಿಳಿಸುವ ಮೂಲಕ ಚಿಕ್ಕಸಿಂದಗಿ ಸದ್ಗುರು ವೀರೇಶ್ವರ ಶಿವಯೋಗಿಗಳ ಮಠದ ಮನಗೂಳಿ ಮನೆತನದವರು ಯಾವಾಗಲು ಗುರುವಿನ ಮಹಿಮೆ ಅರಿತು ಕೊಂಡು ಭಕ್ತಿ ಭಾವದಿಂದ ನಾವು ಇದ್ದವರು ಆದ್ದರಿಂದ ಚಿಕ್ಕಸಿಂದಗಿ ಸದ್ಗುರು ವೀರೇಶ್ವರ ಶ್ರೀಮಠ ನಿರ್ಮಾಣ ಮಾಡಲು 10 ಲಕ್ಷ ಅನುದಾನ ನೀಡುವದಾಗಿ ಭರವಸೆ ನೀಡಿದರು.
ತಾಳಿಕೋಟಿಯ ಹಿರೂರ ಶ್ರೀ ಅನ್ನ ದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ನೀಡಿರುವ ಸದ್ಗುಣ ಉತ್ತಮ ಆಚಾರ ವಿಚಾರ ದಾನ ಧರ್ಮ ಪರೋಪಕಾರ ಗುಣಗಳು ಜೀವನದಲ್ಲಿ ರೂಡಿಸಿ ಕೊಂಡು ಹೋಗುವಂತ ಪ್ರೇರಣೆ ಮಾತುಗಳು ಅವರಿಗೆ ಕಲಿಸಬೇಕು ಎಂದರು.
ಎಂ.ಡಿ.ಪಾಟೀಲ.ಮಲ್ಲನಗೌಡ ಬಿರಾದಾರ ನೂತನ ಶಾಸಕರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ನೂತನ ಸಿಂದಗಿ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷರಾದ ಚಂದ್ರಕಾಂತ ಸಿದ್ದಪ್ಪ ಬೂದಿಹಾಳ ಅವರಿಗೆ ಶಾಸಕ ಅಶೋಕ ಮನಗೂಳಿ ಸನ್ಮಾನಿಸಿದರು.
ವೇದಿಕೆಯ ಮೇಲೆ ಹಿರೇಮಠದ ಶಂಕರಲಿಂಗಯ್ಯ ಗುರಲಿಂಗಯ್ಯ ಹಿರೇಮಠ. ಬಸಯ್ಯ ಈರಯ್ಯ ಮಠವತಿ ವೇದಿಕೆ ಮೇಲೆ ಇದ್ದರು. ಬಸವಣ್ಣನಾಗಿ ಗುರುನಾಥ ಮೈಂದರಗಿ ವಹಿಸಿದರು.
ಕೆರುಟಗಿ ಹಿರೇಮಠದ ಸಂಗೀತ ಶಿಕ್ಷಕ ರೇಣುಕಾಚಾರ್ಯ ಹಿರೇಮಠ ಗವಾಯಿಗಳು ಮಹಾಂತೇಶ ಕಾಳಗಿ ಸಂಗೀತ ಸೇವೆ ನೆರವೇರಿಸಿದರು. ಪ್ರಕಾಶ ತುಪ್ಪದ ಸ್ವಾಗತಿಸಿ ವಂದಿಸಿದರು.