spot_img
spot_img

ಪಾಲಕರು ಮಕ್ಕಳಿಗೆ ಪುಸ್ತಕ ಓದುವ ಅಭಿರುಚಿ ಬೆಳಸಬೇಕು- ಬಾಲಶೇಖರ ಬಂದಿ

Must Read

spot_img
- Advertisement -

ಮೂಡಲಗಿ: ‘ಪಾಲಕರು ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸ್ತಕಗಳನ್ನು ನೀಡಿ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.

ಮೂಡಲಗಿ ಶೈಕ್ಷಣಿಕ ತಾಲ್ಲೂಕಿನ ಮೆಳವಂಕಿ ಸಿದ್ಧಾರೂಢಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪುಸ್ತಕಗಳು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಹಾಗೂ ಸಾಧನೆಯತ್ತ ನಡೆಸುವಲ್ಲಿ ಜ್ಞಾನ ದೀಪಗಳಾಗಿವೆ ಎಂದರು. 

ಪಾಲಕರು ಮಕ್ಕಳನ್ನು ನಿರ್ಲಕ್ಷಿಸಬಾರದು. ದೇಶದ ಭವಿಷ್ಯವಾಗಿರುವ ಇಂದಿನ ಮಕ್ಕಳಿಗೆ ಉತ್ತಮ ಕಲಿಕೆಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಮತ್ತು ಅಕ್ಷರ ಜ್ಞಾನದೊಂದಿಗೆ ಸಂಸ್ಕಾರ ನೀಡಬೇಕು ಎಂದರು. 

- Advertisement -

ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ ಮೆಳವಂಕಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಗ್ರಾಮೀಣ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಶಾಲೆಗಳು ಮುಖ್ಯವಾಗುತ್ತವೆ ಎಂದರು.

          ಶಿಕ್ಷಕ ಈರಣ್ಣ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. 

      ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಶಾಲೆಯ ಪ್ರಗತಿಗೆ ದೇಣಿಗೆ ನೀಡಿದ ಮಹನೀಯರನ್ನು ಸಮಾರಂಭದಲ್ಲಿ ಸನ್ಮಾನಿಸಿದರು. 

- Advertisement -

ಮೆಳವಂಕಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯ್ತಿ ಪದಾಧಿಕಾರಿಗಳು, ಶಾಲೆಯ ಎಸ್‍ಡಿಎಂಸಿ ಪದಾಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಿದ್ದರು. 

ಮುಖ್ಯ ಶಿಕ್ಷಕ ಐ.ಪಿ. ಸಜ್ಜನ, ಶಿಕ್ಷಕರ ಸಂಘದ ಮಾಲತೇಶ ಸಣ್ಣಕ್ಕಿ, ಬಿ.ಬಿ. ಕೆವಟಿ, ಎಸ್.ಎಂ. ದಬಾಡಿ, ಕಲ್ಲೋಳಿ ಸಿಆರ್‍ಪಿ ಗಣಪತಿ ಉಪ್ಪಾರ, ಮೆಳವಂಕಿ ಸಿಆರ್‍ಪಿ ಮಹಾದೇವ ಅಮನಿ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿಗಳಾದ ಭೀಮಶಿ ಜಡಕಿನ ಹಾಗೂ ಲಕ್ಷ್ಮೀ ಮಠಪತಿ ನಿರೂಪಿಸಿದರು, ಮಂಜುಳಾ ಬೀರನಗಡ್ಡಿ ವಂದಿಸಿದರು. 

ವಿದ್ಯಾರ್ಥಿಗಳ ಮನರಂಜನೆ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದವು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group