ಘಟಪ್ರಭಾ – ದಿ ೨೩ ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮರ 200ನೇ ವಿಜಯೋತ್ಸವ ಹಾಗೂ ಅಭಯ ರಾಣಿ ಅಬ್ಬಕ್ಕರ 500ನೇ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ರಾಣಿ ಚನ್ನಮ್ಮ ಮತ್ತು ಅಬ್ಬಕ್ಕರ ರಥಯಾತ್ರೆ ನಡೆಯುತ್ತಿದ್ದು ಆ ನಿಮಿತ್ತ ಈ ಮಂಗಳವಾರ ಘಟಪ್ರಭಾ ನಗರದ ಮೃತ್ಯುಂಜಯ ಸರ್ಕಲ್ ನಲ್ಲಿ ರಥಯಾತ್ರೆಯ ಸ್ವಾಗತವನ್ನು ಆಯೋಜಿಸಲಾಗಿದೆ.
ಕಿತ್ತೂರು ರಾಣಿ ಚನ್ನಮ್ಮ ಹಾಗೂ ಅಬ್ಬಕ್ಕರ ಸಾಹಸ, ತ್ಯಾಗ ಮತ್ತು ದೇಶಭಕ್ತಿಯನ್ನು ಸಾರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ವಕೀಲ ಹಾಗೂ ರಾಷ್ಟ್ಟ್ರೋತ್ಥಾನ ಪರಿಷತ್ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಚೌಕಶಿ ವಿನಂತಿಸಿಕೊಂಡಿದ್ದಾರೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮ್ಮ ಮಹಾನ್ ರಾಣಿ-ವೀರರ ಸಾಧನೆಗಳಿಗೆ ಗೌರವ ಸಲ್ಲಿಸಿ.ಇದೆ ದಿನ ಸಂಜೆ 7 ಗಂಟೆಗೆ ಗೋಕಾಕ ನಗರದ ಕೊಳವಿ ಹನುಮಾನ ಮಂದಿರದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪಂಜಿನ ಮೆರವಣಿಗೆಯೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಕಾರಣ ಆ ಕಾರ್ಯಕ್ರಮದಲ್ಲಿಯೂ ಭಾಗವಹಿಸಲು ಅವರು ಪ್ರಕಟಯೊಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ
Please share to all groups

