ಮೂಡಲಗಿ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಎನ್.ಎಸ್.ಎಫ್ ಪ್ರೌಢಶಾಲೆ ಕುಲಗೋಡದಲ್ಲಿ ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದ ವಾಲಿಬಾಲ್ ಪಂದ್ಯದಲ್ಲಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶಿ.ಬ. ಪಾಟೀಲ ಪ್ರಾಥಮಿಕ ಶಾಲೆಯ ಬಾಲಕ ಹಾಗೂ ಬಾಲಕಿಯರ ಎರಡು ತಂಡದ ಆಟಗಾರರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಬಾಲಕರ ತಂಡಕ್ಕೆ: ಪ್ರೇಮಸಾಯಿ ಬಡಿಗೇರ, ನಹೀಮ ನದಾಫ್, ತೇಜಸ್ ಬಡಿಗೇರ, ಹರೀಶ ಹೆಬ್ಬಾಳ, ಸನತ್ ಕಂಬಾರ, ಬಾಲಕಿಯರ ತಂಡಕ್ಕೆ: ಅಂಜನಾ ಚೌಗಲಾ, ಶ್ರೇಯಾ ಕಬಾಡಗಿ, ಸಂಜನಾ ಬಬಲಿ, ತೇಜಶ್ವಿನಿ ಕೋಟಗಿ, ಕಾವೇರಿ ಹುಲ್ಲೋಳಿ.
ಈ ಕ್ರೀಡಾಪಟುಗಳಿಗೆ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವಗೌಡ ಶಿ. ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯ ರಾಜು ವಾಯ್. ಉಪ್ಪಾರ, ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಂ. ಡಬ್ಬನವರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

