- Advertisement -
ಮೈಸೂರು -ನಗರದ ಕೆಆರ್‌ಎಸ್ ರಸ್ತೆ, ಯಾದವಗಿರಿ, ರೈಲ್ವೆ ಕ್ರೀಡಾಂಗಣದ ಎದುರು ಸಿಎಫ್‌ಟಿಆರ್‌ಐ ಪಕ್ಕದಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆ.೨೪ರಂದು ಶನಿವಾರ ಸಕಲ ಅನಿಷ್ಠ ನಿವೃತ್ತಿಗಾಗಿ ನವಗ್ರಹ ಹೋಮ ನಡೆಯಲಿದೆ.
ವಿದ್ವಾನ್ ಶ್ರೀ ಬಾಗೇವಾಡಿ ಆಚಾರ್ಯರವರ ನೇತೃತ್ವದಲ್ಲಿ ಬೆಳಿಗ್ಗೆ ೯ರಿಂದ ೧೧ರವರೆಗೆ ಪವಮಾನ ಹಾಗೂ ನವಗ್ರಹ ಹೋಮ, ಪ್ರಾಣ ದೇವರಿಗೆ ಮಧು ಅಭಿಷೇಕ, ರೇಷ್ಮೆ ವಸ್ತ್ರ ಸೇವೆಯನ್ನು ಏರ್ಪಡಿಸಲಾಗಿದೆ ಎಂದು ಮಠದ ವ್ಯವಸ್ಥಾಪಕರಾದ ಶ್ರೀ ಅನಿರುದ್ಧಾಚಾರ್ಯ ಪಾಂಡುರಂಗಿಯವರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಪಾಲ್ಗೊಳ್ಳಲಿದ್ದಾರೆ. ವಿವರಗಳಿಗೆ ಮೊಬೈಲ್ ೯೬೮೬೯೭೮೮೬೧ ಸಂಪರ್ಕಿಸಬಹುದು.