ದೇವಿ ಪುರಾಣ ಕೇಳುವುದರಿಂದ ನೆಮ್ಮದಿಯ ಬದುಕು ಸಾಧ್ಯ

Must Read

ಹಳ್ಳೂರ – ನವರಾತ್ರಿಯಲ್ಲಿ ದೇವಿಯ ಪುರಾಣ ಪ್ರವಚನ ಭಕ್ತಿಯಿಂದ ಕೇಳುವುದರಿಂದ ಮಾನಸಿಕ ನೆಮ್ಮದಿ ದೊರೆತು ಸುಖ ಸಮೃದ್ಧಿ ಜೀವನವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಕಪರಟ್ಟಿ ಬಸವರಾಜ ಸ್ವಾಮೀಜಿ ಅವರು ಹೇಳಿದರು.

ಅವರು ಗ್ರಾಮದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ 10 ದಿವಸಗಳ ಕಾಲ ನಡೆದ ಶ್ರೀ ದೇವಿ ಪುರಾಣ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ನವರಾತ್ರಿ ಉತ್ಸವ ಆಚರಣೆಯಲ್ಲಿ ದುರಾಲೋಚನೆಗಳನ್ನು ಹೊಡೆದೋಡಿಸಿ ಪರಾಶಕ್ತಿಯಾದ ದೇವಿಯನ್ನು ಪೂಜಿಸಿ ಧ್ಯಾನಿಸಿ ಪುನೀತರಾಗಿರಿ. ಮಹಾತ್ಮರ ಮಾತುಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಂಡು ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಹೊಸ ಯರಗುದ್ರಿ ಈರಾ ಲಿಂಗೇಶ್ವರ ಮಠದ ಸಿದ್ದಪ್ರಭು ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪರೋಪಕಾರ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಸ್ತಿ ಅಂತಸ್ತು, ಅಧಿಕಾರ ಕ್ಷಣಿಕ ಸ್ತಿರವಲ್ಲ ನಾನೆಂಬ ಅಹಂಕಾರ ಒಳ್ಳೆಯದಲ್ಲ ನರ ಮಾನವರಿಂದ ಏನು ನಡೆಯಲು ಸಾಧ್ಯವಿಲ್ಲ ದೇವರ ಕೃಪೆಯಿಂದ ಎಲ್ಲವೂ ನಡೆಯುತ್ತದೆ. ರಾಕ್ಷಸ ಕುಲದವರು ಎಷ್ಟೇ ತೊಂದರೆ ನೀಡುತ್ತಿದ್ದರೆ ದೇವರ ನಾಮಸ್ಮರಣೆ ಪುರಾಣ ಪ್ರವಚನ ಕೇಳುವುದರಿಂದ ದುಷ್ಟ ಶಕ್ತಿಗಳನ್ನು ಮೂಲೆಗುಂಪು ಮಾಡುವುದು ದೈವಿಶಕ್ತಿಯಲ್ಲಿ ಅಡಗಿದೆ ಎಂದು ಹೇಳಿದರು.

ಶ್ರೀ ಬಸವರಾಜ ಸ್ವಾಮೀಜಿಗಳು ಹಾಗೂ ಸಿದ್ದಪ್ರಭೂ ಶಿವಾಚಾರ್ಯ ಸ್ವಾಮೀಜಿಗಳಿಗೆ ಕಿರೀಟ ಧಾರಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ದೇವಿಯ ವೇಷ ಭೂಷಣ ಧರಿಸಿದ ನೂರಾರು ಮುದ್ದು ಮಕ್ಕಳಿಗೆ ಹಾಗೂ ಸಹಸ್ರಾರು ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬಿದರು. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ,ನಿರೂಪಿಸಿ, ಚನ್ನಪ್ಪ ಬಡಿಗೇರ ವಂದಿಸಿದರು.ಗ್ರಾಮದ ಗುರು ಹಿರಿಯರ, ಕಮಿಟಿ, ಅರ್ಚಕರ ಸಮ್ಮುಖದಲ್ಲಿ ಕಾರ್ಯಕ್ರಮವೂ ನೆರವೇರಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group