ಬಿಜೆಪಿ ದುರಾಡಳಿತದಿಂದ ಬೇಸತ್ತ ಜನತೆ – ಖಂಡ್ರೆ

Must Read

ಬೀದರ – ಬಿಜೆಪಿಯ ದುರಾಡಳಿತದಿಂದ ಜನರು ಬೆಸತ್ತಿದ್ದರು ಹೀಗಾಗಿ ನಮ್ಮ‌ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಅಧಿಕಾರ ದುರುಪಯೋಗ ಅಟ್ಟಹಾಸದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆ ಗೆಲುವಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅವನತಿಯತ್ತ ಸಾಗಿದೆ. ಈ ಚುನಾವಣೆಯಿಂದ ಬೀದರ್ ನಲ್ಲಿ ಬಿಜೆಪಿ ಪಕ್ಷ ಅಂತ್ಯವಾಗಲಿದೆ ಎಂದರು.

ಇಂದಿನಿಂದ ಬೇರು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಿ ಮುಂಬರುವ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿಯವರು ವೈಯಕ್ತಿಕವಾಗಿ ಟೀಕೆಗಳನ್ನು ಮಾಡಿದ್ದರು ಅವರು ಮಾಡಿದ ಟೀಕೆಗೆ ಮತದಾರ ಕಿವಿಗೊಟ್ಟಿಲ್ಲ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಲ್ಲಿಯೆ ವಾಸ್ತವ್ಯ ಮಾಡಿದರು ಪ್ರಯೋಜನ ವಾಗಿಲ್ಲ. ಹಣ ಬಲ ತೋಳ್ಬಲದ‌ ಮೂಲಕ ಬಿಜೆಪಿ ಚುನಾವಣೆ ಮಾಡಲು ಹೊರಟಿತ್ತು ಆದರೂ ಪ್ರಯೋಜನ ವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನುಡಿದರು.

ಇತ್ತ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಭೀಮರಾವ್ ಪಾಟೀಲ, ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಬಿಜೆಪಿಯವರು ಸೀರೆ ಹಂಚಿದರು ಈಗ ಅವೇ ಸೀರೆಗಳನ್ನು ಪ್ರಭು ಹಾಗೂ ಖೂಬಾ ಅವರು ಉಟುಗೊಂಡು ಟಿಕಾ ಹಚ್ಚಿಕೊಂಡು ಮನೆಯಲ್ಲಿ ಇರಲಿ ಎಂದು ವೈಯಕ್ತಿಕ ಟೀಕೆಗಿಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ...

More Articles Like This

error: Content is protected !!
Join WhatsApp Group