spot_img
spot_img

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

Must Read

- Advertisement -

ಬೆಳಗಾವಿ: “ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ ಮಾಡಿಕೊಂಡು ನಮ್ಮ ವೃತ್ತಿ ಬದ್ಧತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಜರುಗಲಿ”ಎಂದು ಜಿಲ್ಲಾ ಯೋಜನಾ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಸಲೀಂ ನದಾಫ ಹೇಳಿದರು.

ಅವರು ಬೆಳಗಾವಿ ಯಲ್ಲಿ ಎನ್ ಇ ಪಿ ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ದಿ ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಬೆಳಗಾವಿ ಜಿಲ್ಲೆಯ ಸಮನ್ವಯ ಶಿಕ್ಷಣ ತರಬೇತಿ ಉದ್ಘಾಟಿಸಿ ಮಾತನಾಡಿದರು

ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಗಳಾದ ರವಿ ಮೆಳವಂಕಿ ಮಾತನಾಡಿ “ವಿವಿಧ ಕೌಶಲಗಳಲ್ಲಿ ಅವಕಾಶಗಳನ್ನು ನೀಡಬೇಕು. ಅಂದಾಗ ಮಾತ್ರ ಅವರು ತಮ್ಮಲ್ಲಿನ ಕೀಳರಿಮೆಯಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದು. ಈ ದಿಸೆಯಲ್ಲಿ ತಮ್ಮ ತಮ್ಮ ತಾಲೂಕಿನ ವಿಕಲಚೇತನ ಮಕ್ಕಳ ಶೈಕ್ಷಣಿಕ ಚಟುವಟಿಕೆ ಸಾಗಲಿ” ಎಂದು ಕರೆ ನೀಡಿದರು. 

- Advertisement -

ಬೆಂಗಳೂರಿನ ಎಪಿಡಿ ಸಂಸ್ಥೆಯ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಕಲಚೇತನರಿಗೆ ಪ್ರೀತಿ, ಕಾಳಜಿ ಬೇಕಿದೆಯೇ ವಿನಃ ಕರುಣೆ, ದಯೆ ಬೇಕಾಗಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ನ್ಯೂನತೆಗಳಿವೆ. ಅವುಗಳನ್ನು ಮೀರಿ ಸಮಾಜದಲ್ಲಿ ಬೆಳೆಯಬೇಕಿದ್ದು, ಘನತೆಯ ಬದುಕನ್ನು ಕಟ್ಟಿಕೊಳ್ಳಲು ಪ್ರತಿಯೊಬ್ಬರು ಆರ್ಥಿಕವಾಗಿ ಬಲಿಷ್ಠವಾಗಬೇಕಿದೆ.ಈ ದಿಸೆಯಲ್ಲಿ ತರಬೇತಿ ಜರುಗುತ್ತದೆ. ತಮಗಿರುವ ಸಂದೇಹಗಳನ್ನು ಕೂಡ ಈ ತರಬೇತಿ ಸಂದರ್ಭದಲ್ಲಿ ಕೇಳಿ ತಿಳಿಯುವ ಮೂಲಕ ತರಬೇತಿ ಯಶಸ್ವಿಯಾಗಲು ಎಲ್ಲರ ಸಹಕಾರ ಜರುಗುವ ತರಬೇತಿ ಪಡೆದುಕೊಳ್ಳಲು ಕರೆ ನೀಡಿದರು. 

ವೇದಿಕೆಯಲ್ಲಿ ಬೆಳಗಾವಿ ನಗರದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಐ ಡಿ ಹಿರೇಮಠ. ಡಿಡಿಪಿಐ ಕಛೇರಿಯ ತಾಂತ್ರಿಕ ಸಹಾಯಕರಾದ ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು. 

ಈ ತರಬೇತಿ ಗೆ ಸವದತ್ತಿ ತಾಲೂಕಿನ ವೈ ಬಿ ಕಡಕೋಳ, ಎಸ್ ಬಿ ಬೆಟ್ಟದ,ಚಸಿ. ವ್ಹಿ.ಬಾರ್ಕಿ, ಡಿ ಎಲ್ ಭಜಂತ್ರಿ, ಬೆಳಗಾವಿ ನಗರದ ಭಾರತಿ ತಳವಾರ, ಎಸ್. ಬಿ. ಪಾಟೀಲ, ಎಂ. ಎಸ್ ಯಂಕಂಚಿ, ಬೆಳಗಾವಿ ಗ್ರಾಮೀಣ ಅರುಣಾ ಕೋಳಿ, ರಾಮಕೃಷ್ಣ ಹಲಗಿ, ಕಿತ್ತೂರು ತಾಲೂಕಿನ ಬಿ ಡಿ ಕಲಬಾವಿ, ಆರತಿ ಕಲಘಟಕರ, ಆದರ್ಶ ಘೋಡಗೇರಿ, ರಾಮದುರ್ಗ ತಾಲೂಕಿನ ಆರ್ ಎಸ್ ಸಂಕನ್ನವರ, ಎಸ್ ಎಂ ಬಡಿಗೇರ, ಖಾನಾಪುರ ತಾಲೂಕಿನ ಎಸ್ ಎನ್ ಕಮ್ಮಾರ, ಬೈಲಹೊಂಗಲ ತಾಲೂಕಿನ ಎಂ. ಐ. ಕಾಜಗಾರ, ಆರ್ ಎನ್ ಇಂಗಳಗಿ, ಶ್ರೀಮತಿ ಎಸ್ ಎಸ್ ಕಮ್ಮಾರ, ಅಂಜಲಿ ಕವಿಲ್ಕರ ಸೇರಿದಂತೆ ವಿವಿಧ ತಾಲೂಕಿನ ಲ್ಲಿ ಸೇವೆ ಸಲ್ಲಿಸುತ್ತಿರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ತರಬೇತಿ ಯಲ್ಲಿ ಪಾಲ್ಗೊಂಡಿದ್ದರು. 

- Advertisement -

ಮೂರು ದಿನಗಳ ಕಾಲ ತರಬೇತಿ ನೀಡುವ ಸಲುವಾಗಿ ಭಾಸ್ಕರ್. ಸುರೇಶ್.ಕದಂಪುರ ಡಾ. ಅಕ್ಷತಾ ಕುಮಾರಿ. ಡಾ. ಈ. ರಂ.ನಾಜ್ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಎಸ್ ಬಿ ಪಾಟೀಲ ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು. ಆರ್ ಎನ್ ಇಂಗಳಗಿ ವಂದಿಸಿದರು..

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group