ಸಿಂದಗಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪರೀಕ್ಷೆ ಮೌಲ್ಯಮಾಪನ ಸಮಯದಲ್ಲಿ 8ನೇ 9ನೇ ಮತ್ತು 10ನೇ ಹಾಗೂ ಪಿ ಯು ಬೋರ್ಡ ಪರೀಕ್ಷೆ ನಿಮಿತ್ತ ಶಿಕ್ಷಕರನ್ನು/ಉಪನ್ಯಾಸಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಖಂಡಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಲ್ಲೇಶ್ವರಂ ಬೆಂಗಳೂರು ಕಛೇರಿ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಾಧ್ಯಕ್ಷ, ವಿ ಪ ಮಾಜಿ ಶಾಸಕ ಅರುಣ ಶಹಾಪುರ ಅವರು ಮನವಿಯಲ್ಲಿ ಶಿಕ್ಷಕರು ಅವಮಾನ, ಮಾನಸಿಕ ಹಿಂಸೆ, ಮಾನಸಿಕ ಒತ್ತಡ, ನೋಟೀಸ್ ಜಾರಿ ಮಾಡುವುದು, ಅಮಾನತ್ತು ಮಾಡುವುದು ಮತ್ತು ಇನ್ನಿತರ ಇಲಾಖೆಯಿಂದ ಸೃಷ್ಟಿಯಾಗಿರುವ ಗೊಂದಲಗಳಿ0ದ ಜರ್ಜರಿತರಾಗಿದ್ದಾರೆ. ಶಿಕ್ಷಣ ಇಲಾಖೆ ಶಿಕ್ಷಕರನ್ನು ಶಿಕ್ಷಕರಾಗಿ ನಡೆಸಿಕೊಳ್ಳದೇ ಕಾರ್ಮಿಕ ಇಲಾಖೆಯ ಕಾರ್ಮಿಕರಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಶಿಕ್ಷಣ ಇಲಾಖೆಯ ಇಂತಹ ಅವೈಜ್ಞಾನಿಕ, ಅಮಾನವೀಯ ಹಾಗೂ ಸರ್ವಾಧಿಕಾರಿಯ ಧೋರಣೆ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪಧವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳಾದ ವೈ ಎ ನಾರಾಯಣಸ್ವಾಮಿ, ಅ ದೇವೇಗೌಡ, ಭೋಜೇಗೌಡರು, ಎಂ ಚಿದಾನಂದ , ಹನುಮಂತ ನಿರಾಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವೃಷಭೇಂದ್ರಸ್ವಾಮಿ ಉಪಸ್ಥಿತರಿದ್ದರು.