ಸಿಂದಗಿಯಲ್ಲಿ ನಿಲ್ಲದ ಗೂಡಂಗಡಿಗಳ ದರ್ಬಾರು; ಸಂಚಾರಕ್ಕೆ ಸಂಚಕಾರ

Must Read

ವರದಿ; ಪಂಡಿತ ಯಂಪೂರೆ

ಸಿಂದಗಿ:  ೨೦೨೪ ಸೆಪ್ಟಂಬರ ೯ ರಂದು ಶಾಂತವೀರ ಬಿರಾದಾರ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಪಣ ತೊಟ್ಟು ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಾಡಿ ದಿಟ್ಟ ಹೆಜ್ಜೆ ಇಟ್ಟಿದ್ದರಿಂದ ಅವರೂ ಬುಲ್ ಡೋಜರ್  ಬಾಬಾ ಎಂದೆ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಅವರ ೬ ತಿಂಗಳ ಅವಧಿ ಮುಗಿಯುತ್ತಿದಂತೆ ಪಟ್ಟಣದಲ್ಲಿ ಗೂಡಂಗಡಿಗಳ ದರ್ಬಾರು ಮತ್ತೆ ಆರಂಭವಾಗಿದೆ. ಇದರಿಂದ ವಾಹ ಸಂಚಾರಕ್ಕೆ ಅಡ್ಡಿ ತಂದೊಡ್ಡಿದೆ. ಪುರಸಭೆ ಆಡಳಿತಾಧಿಕಾರಿಗಳು ಮೌನಕ್ಕೆ ಜಾರಿದ್ದೇಕೆ ಎನ್ನುವ ಸಾರ್ವಜನಿಕರ ಪ್ರಶ್ನೆ ಯಕ್ಷಪ್ರಶ್ನೆಯಾಗಿದೆ.

ಹೌದು, ಮೇ  ತಿಂಗಳಲ್ಲಿ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಕಾರ್ಯವೈಖರಿಯನ್ನು ವಿರೋಧಿಸಿ ೧೬ ಜನ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಡಾ. ಶಾಂತವೀರ ಮನಗೂಳಿ, ಉಪಾಧ್ಯಕ್ಷರಾಗಿ ಸಂದೀಪ ಚೌರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು ಅಂದಿನಿಂದ ಗೂಡಂಗಡಿಗಳ ತೆರವು ಕಾಯಾಚರಣೆಗೆ ತೆರೆ ಬಿದಂತಾಗಿ ಎಂದಿನಂತೆ ರಸ್ತೆ ಅತಿಕ್ರಮಣವಾದ ಕೆಲ ಜಾಗೆಗಳು ಉಳ್ಳವರ ಪಾಲಾಗುವ ಹಂತಕ್ಕೆ ತಲುಪಿ ಅಲ್ಲಲ್ಲಿ ಡಬ್ಬಾ ಅಂಗಡಿಗಳು ಒಂದೊಂದಾಗಿ ರಸ್ತೆಗಿಳಿಯಲು ಪ್ರಾರಂಭಿಸಿದ್ದವು

ಡಾ.ಶಾಂತವೀರ ಮನಗೂಳಿ ಅವರ ೬ ತಿಂಗಳ ಅವಧಿಯು ಕೂಡಾ ಡಿ.೩ ರಂದು ಮುಗಿಯುತ್ತಿದಂತೆ ಹೇಳೋರು ಕೇಳೊರು ಇಲ್ಲದಂತೆ ಎಲ್ಲೆಂದರಲ್ಲಿ ಡಬ್ಬಾ ಅಂಗಡಿಗಳು ರಾತ್ರೋ ರಾತ್ರಿ ಆಕ್ರಮಿಸಿಕೊಳ್ಳುತ್ತಿವೆ. ಚುನಾಯಿತ ಸದಸ್ಯರ ಅವಧಿ ಮುಗಿದ ನಂತರ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಆದರೆ ಇಂಡಿ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ ಅವರು ತಮಗೆ ಸಂಬಂದವಿಲ್ಲದಂತೆ ಇತ್ತ ಕಣ್ಣೆತ್ತಿ ನೋಡುವ ಔದಾರ್ಯ ತೋರುತ್ತಿಲ್ಲ ಎನ್ನುವುದು ಜನರ ಆರೋಪವಾಗಿದೆ.

ಪಟ್ಟಣದ ಮಹಾತ್ಮಾ ಗಾಂಧೀಜಿ ವೃತ್ತದಿಂದ ಆರ್.ಡಿ.ಪಾಟೀಲ ಕಾಲೇಜಿನವರೆಗೆ, ಡಾ. ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ, ಡೋಹರ ಕಕ್ಕಯ್ಯ ವೃತ್ತದಿಂದ ಜೇವರ್ಗಿ ಬೈಪಾಸ್ ವರೆಗೆ ಗೂಡಂಗಡಿಗಳು ಶಾಶ್ವತ ಅಂಗಡಿಗಳಾಗಿ ಸರಾಗವಾಗಿ ತಲೆ ಎತ್ತಿ ರಸ್ತೆಗಿಳಿದಿವೆ ಇದಕ್ಕೆ ಅಧಿಕಾರಿಗಳು ಕ್ಯಾರೆ ಎನ್ನದೆ ನಿದ್ರೆಯಲ್ಲಿ ಮಲಗಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿರುವುದು ಸರ್ವೆಸಾಮಾನ್ಯವಾಗಿದೆ.

ನನ್ನ ಅಧಿಕಾರ ಸರಿಯಾಗಿಲ್ಲ ಎಂದು ಎಲ್ಲ ಸದಸ್ಯರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು ಆದರೆ ನನ್ನ ಅವಧಿಯಲ್ಲಾದ ಒಂದು ಹೊಸ ಕೆಲಸಕ್ಕೆ ಕೈ ಹಾಕಿದ ಉದಾಹರಣೆಗಳಿಲ್ಲ. ಪುರಸಭೆ ಆಸ್ತಿಗಳನ್ನು ತೆರವು ಗೊಳಿಸಿ ಪುರಸಭೆಗೆ ಹಸ್ತಾಂತರಿಸಿಕೊಳ್ಳುವಂತೆ ಸಭೆಯಲ್ಲಿ ಠರಾವು ಮಾಡಲಾಗಿದೆ ಅವುಗಳನ್ನು ಏಕೆ ಹಸ್ತಾಂತರಿಸಿಕೊಳ್ಳಲ್ಲಿಲ್ಲ. ಅಲ್ಲದೆ ಶಾಸಕರು ಅವರ ಸಹೋದರರು ಇದ್ದರು ಕೂಡಾ ಎಲ್ಲ ಅಭಿವೃದ್ಧಿ ಕಾರ್ಯಗಳು ಮಾಡಬಹುದಿತ್ತು. ಅವರಿಗೆ ನೀಡಿದ ಸಹಕಾರ ನನಗೆ ನೀಡಿದರೆ ಪಟ್ಟಣವನ್ನು ನಂದನವನವನ್ನಾಗಿ ಮಾಡಿ ತೋರಿಸುತ್ತಿದ್ದೆ. ಪ್ರತಿಯೊಂದಕ್ಕೂ ಅಡ್ಡಿ ಪಡಿಸಿದ್ದಾರೆ ನನಗೆ ಜನರ ಸಹಕಾರದಿಂದ ಕೆಲಸ ಮಾಡಿದ ತೃಪ್ತಿ ನನಗಿದೆ. ಪೌರ ನೌಕರರಿಗೆ ಇಡಬೇಕಾದ ಜಾಗೆಯನ್ನು ತೆರವು ಗೊಳಿಸಿ ಅವರಿಗೆ ಅನುಕೂಲ ಮಾಡಬಹುದಿತ್ತು ಆಧಾಗ್ಯೂ ಆ ಕಾರ್ಯ ಮಾಡಿಲ್ಲ ಅವರ ಮನಬಂದಂತೆ ಅದಿಕಾರ ಅನುಭವಿಸಿ ಕೈ ತೊಳೆದುಕೊಂಡಿದ್ದಾರೆ ಅವರಿಗೆ ಜನರೆ ತಕ್ಕ ಉತ್ತರ ನೀಡುತ್ತಾರೆ.

ಶಾಂತವೀರ ಬಿರಾದಾರ
ಮಾಜಿ ಅದ್ಯಕ್ಷರು ಪುರಸಭೆ ಸಿಂದಗಿ.

         ಗೂಡಂಡಿಗಳನ್ನು ತೆರವುಗೊಳಿಸಿ  ಬುಲ್ಡೋಜರ್  ಬಾಬಾ ಎನ್ನುವ ಹೆಸರು ಪಡೆದು ಜನರ ಮೆಚ್ಚುಗೆಗೆ ಪಾತ್ರರಾದ ಶಾಂತಗೌಡ ಬಿರಾದಾರ ಅವರ ೬ ತಿಂಗಳ ಅವಧಿಯಲ್ಲಿ ಆದ ಕಾರ್ಯ ಡಾ. ಶಾಂತವೀರ ಮನಗೂಳಿ ಅವರ ೩೬ ತಿಂಗಳ ಅವಧಿಯಲ್ಲಿ ಆಗಿಲ್ಲ ಬರೀ ದ್ವೇಷ ರಾಜಕಾರಣಕ್ಕೆ ಜೋತು ಬಿದ್ದು ದಲಿತ ಪೌರ ಕಾರ್ಮಿಕರಿಗೆ ನೀಡಬೇಕಾದ ಜಾಗೆಯನ್ನು ತೆರವುಗೊಳಿಸಿ ನೀಡದೇ ಪುರಸಭೆಯಲ್ಲಿ ದಲ್ಲಾಳಿಗಳ ದರ್ಬಾರು ಆಡಳಿತ ನಡೆಸಿದ್ದಾರೆ ಅಲ್ಲದೆ ಬಸ್ ನಿಲ್ದಾಣದ ಮುಂದೆ ಗೂಡಂಗಡಿಗಳಿಂದ ಸಾರ್ವಜನಿಕ ಗ್ರಂಥಾಲಯ ಚಿಕನ್ ಸೆಂಟರ ಮಾಯವಾಗುವಂತಾಗಿದೆ ಇದನ್ನು ತೆರವುಗೊಳಿಸುವ ಕಾರ್ಯ ನಡೆಯಬೇಕಿದೆ.

ಸಂತೋಷ ಮಣಿಗೇರಿ
ಉತ್ತರ ವಲಯ ಸಂಚಾಲಕರು, ರಣಧೀರ ಪಡೆ

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group