spot_img
spot_img

Mudalagi: ಅಮರೇಶಗೌಡ ಪಾಟೀಲರಿಗೆ ಪಿ.ಎಚ್.ಡಿ ಪದವಿ

Must Read

spot_img
- Advertisement -

ಮೂಡಲಗಿ:  ಮೂಡಲಗಿ ಶಿಕ್ಷಣ ಸಂಸ್ಥೆಯ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಮರೇಶಗೌಡ ಪಾಟೀಲ ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.

ಅಮರೇಶಗೌಡ ಅವರು “ದಿ ರೋಲ್ ಆಫ್ ಕೋ-ಆಪ್‍ರೆಟಿವ್ ಬ್ಯಾಂಕ್ಸ ಇನ್ ಅಗ್ರಿಕಲ್ಚರಲ್ ಡೆವಲಪ್ ಮೆಂಟ್ : ಎ ಕೇಸ್ ಸ್ಟಡಿ ಆಫ್ ಬೆಳಗಾವಿ ಡಿಸ್ಟ್ರಿಕ್ಟ ಇನ್ ಕರ್ನಾಟಕ ಸ್ಟೇಟ್” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ್ದಾರೆ.

ಇವರಿಗೆ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಅರ್ಜುನ ಜಂಬಗಿ ಇವರು ಮಾರ್ಗದರ್ಶನ ಮಾಡಿದ್ದಾರೆ. ಅಮರೇಶಗೌಡ ಅವರು ಮೂಲತಃ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದವರು, ಇವರ ಸಾಧನೆಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಸೋನವಾಲ್ಕರ್, ಉಪಾಧ್ಯಕ್ಷರಾದ ಎಸ್.ಆರ್.ಸೋನವಾಲ್ಕರ್, ಸಮಸ್ತ ನಿರ್ದೇಶಕರು, ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಅಮರೇಶಗೌಡ ಪಾಟೀಲ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

- Advertisement -
- Advertisement -

Latest News

ಲೇಖನ : ಆ ನಾಲ್ಕು ಜನ ಯಾರು ?

ಹೌದು, ದಿನ ಬೆಳಗಾದರೆ ಮಾಡೋಕೆ ನೂರೆಂಟು ಕೆಲಸ ಇದ್ರು ಅದೇನೋ ದುಗುಡ, ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಎಲ್ಲಿಯವರೆಗೆ ಎಂದರೆ ನಾವು ಮಾಡುವ ಕೆಲಸದ ಮೇಲೆ ಗುರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group