ಶಾಲಾ ಸಂಸತ್ ಮಂತ್ರಿಗಳ ಪ್ರಮಾಣ ವಚನ

Must Read

ಬೈಲಹೊಂಗಲ: ತಾಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್‌ಗೆ ಆಯ್ಕೆಯಾದ ನೂತನ ಮಂತ್ರಿಗಳಿಗೆ ಸಮಾಜ ವಿಜ್ಞಾನ ಶಿಕ್ಷಕರಾದ ಎಸ್.ಬಿ.ಭಜಂತ್ರಿ ಪ್ರಮಾಣ ವಚನ ಬೋಧಿಸಿದರು.

ಸಂಸತ್ತಿನ ಮಂತ್ರಿಗಳಾಗಿ ನಿರ್ಮಲಾ ಸೊಗಲದ (ಪ್ರಧಾನ ಮಂತ್ರಿ), ಸಂಜು ಸೊಗಲದ (ಪ್ರವಾಸ ಮಂತ್ರಿ), ಅಮೂಲ್ಯ ಸೂರ್ಯವಂಶಿ (ಹಣಕಾಸು ಮಂತ್ರಿ), ಪೃಥ್ವಿ ಗರಗದ (ಶಿಕ್ಷಣ ಮಂತ್ರಿ), ಕಾರ್ತಿಕ ಬಡಿಗೇರ (ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ), ಅಭಿಲಾಷ ಹೊಂಗಲ (ಕ್ರೀಡಾ ಮಂತ್ರಿ), ಸುಶ್ಮಿತಾ ಸೊಗಲದ (ಗ್ರಂಥಾಲಯ ಮಂತ್ರಿ), ಚಿನ್ಮಯಿ ಹಳ್ಳಿಕೇರಿಮಠ (ಸಾಂಸ್ಕೃತಿಕ ಮಂತ್ರಿ), ಮಹೇಶ ಬಾರ್ಕಿ (ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ) ದೇವರ ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಮಂತ್ರಿಗಳಿಗೆ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

ಶಾಲಾ ಸಂಸತ್ತಿನ ನೂತನ ಸ್ಪೀಕರ್ ಆಗಿ ಅಮೃತ ನರೇಂದ್ರಮಠ ಹಾಗೂ ವಿರೋದ ಪಕ್ಷದ ನಾಯಕಿಯಾಗಿ ಪೂಜಾ ಸೊಗಲದ ಆಯ್ಕೆಯಾದರು. ಮಂತ್ರಿಗಳ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ತಿಳಿಸಲಾಯಿತು. ಮುಖ್ಯ ಶಿಕ್ಷಕ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್. ಗುರುನಗೌಡರ, ಎಸ್.ವಿ. ಬಳಿಗಾರ, ಆರ್.ಸಿ. ಸೊರಟೂರ, ಎಚ್.ವಿ.ಪುರಾಣಿಕ, ವಿ.ಬಿ.ಪಾಟೀಲ, ಪ್ರಶಿಕ್ಷಣಾರ್ಥಿಗಳಾದ ಜ್ಯೋತಿ ಹಿರೇಮಠ, ಚೈತ್ರಾ ಹೂಲಿಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group