ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯ ಮುರಗೋಡ ಪ್ಲಾಟದಲ್ಲಿ ನನ್ನ ಗಿಡ, ನನ್ನ ಹೆಮ್ಮೆ ಸಸಿ ನೆಡುವ ಸಪ್ತಾಹಕ್ಕೆ ಪಟ್ಟಣದ ಪರಿಸಪ್ರೇಮಿ ಈರಪ್ಪ ಢವಳೇಶ್ವರ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಮೂಲಕ ಚಾಲನೆ ನೀಡಲಾಯಿತು.
ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ರಾಜ್ಯಾದ್ಯಂತ ಸರಕಾರ ಜು.1 ರಿಂದ 7ರವರಿಗೆ ಹಮ್ಮಿಕೊಂಡಿರುವ ನನ್ನ ಗಿಡ, ನನ್ನ ಹೆಮ್ಮೆ ಸಪ್ತಾಹದ ಅಂಗವಾಗಿ ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಸಸಿ ನೆಟ್ಟು ಪಾಲನೆ ಪೋಷಣೆ ಮಾಡಲು ಸಾರ್ವಜನಿಕರಿಗೆ ಜವಾಬ್ದಾರಿ ನೀಡಲಾಗುವುದು, ಜವಾಬ್ದಾರಿ ತೆಗೆದುಕೊಂಡುವರು ಸರಿಯಾದ ರೀತಿಯಲ್ಲಿ ಗಿಡಗಳನ್ನು ಪಾಲನೆ ಫೋಷನೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಪುರಸಭೆ ಸದಸ್ಯ ಶಿವಾನಂದ ಚಂಡಕಿ ಮಾತನಾಡಿ, ನನ್ನ ವಾರ್ಡಿನಲ್ಲಿ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು ಸಸಿ ನೆಡುವ ಕಾರ್ಯ ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡುತ್ತೆನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಮಡಿವಾಳ, ಈಶ್ವರ ಮುರಗೋಡ, ಚಂದ್ರ ದರುರ, ಶಿವಬಸು ಸುಣಗಾರ, ಅನಿಲ ಗಸ್ತಿ, ಶಿವಬಸು ಶೆಗುಣಶಿ, ಸುಂದರ ಹವಳೆವ್ವಗೋಳ, ಪ್ರಕಾಶ ಕಳ್ಳಿಮನಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾಂದ ಮುಗಳಖೋಡ, ಭೀಮಶಿ ತಳವಾರ, ಸುನೀಲ ಗಸ್ತಿ ಮತ್ತಿತರರು ಇದ್ದರು.