ಬೀದರನಲ್ಲಿ ಪೊನ್ ಪೆ ವಂಚಕನ ಬಂಧನ

0
152

ಬೀದರ – ರಾಜ್ಯದಾದ್ಯಂತ ಸರಕಾರಿ ನೌಕರರನ್ನು ಟಾರ್ಗೆಟ್ ಮಾಡಿ ಅಪಾರ ಪ್ರಮಾಣದಲ್ಲಿ ವಂಚನೆ ಮಾಡಿದ ಫೋನ್ ಪೆ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಬಂಧಿತ ಆರೋಪಿ ಜೊತೆಗೆ ಜಿಲ್ಲಾ ಪೊಲೀಸ್ ಅಧಿಕಾರಿ ಚನ್ನಬಸವ ಸಂವಾದ ನಡೆಸಿದರು..ರಾಜ್ಯದಾದ್ಯಂತ ಸರ್ಕಾರಿ ನೌಕರರಿಗೆ ಹೇಗೆ ವಂಚನೆ ಮಾಡುವುದು ಎಂದು ಆತನ ಮೂಲಕ ಸಂವಾದ ನಡೆಸಿ ಪರಿಶೀಲನೆ ಮಾಡಿದರು

ಬಂಧಿತ ಆರೋಪಿ ಶಿವಪ್ರಸಾದ ತಂದೆ ಶಂಕ್ರೆಪ್ಪಾ ಮಾಡಗಿ..ಬೀದರ ನಗದ ಕೆ ಎಚ್ ಬಿ ಕಾಲೋನಿ ನಿವಾಸಿ ಎಂದು ಗುರುತಿಸಲಾಗಿದ್ದು Phone pay limit set ಮಾಡಿಕೊಳ್ಳಿ ಎಂದು ಕರೆ ಮಾಡಿ ಅವರ ಖಾತೆ ಯಿಂದ ಹಣ ಕದಿಯುತ್ತಿದ್ದ ವಂಚಕ ಎನ್ನಲಾಗಿದೆ

ಇದೇ ರೀತಿ ದುಡ್ಡು ಕಳೆದ ಕೊಂಡ ಸಂಗಪ ತಂದೆ ಮಾದಪ್ಪ ಜೊತೆಗೆ ಆರೋಪಿ ಮೊಬೈಲ್ ಮೂಲಕ ಸಂವಾದ ವಾಯ್ಸ್ ರೆಕಾರ್ಡ್ ಲಭ್ಯವಾಗಿದ್ದು ಬೀದರ ಜಿಲ್ಲೆಯ ಪೊಲೀಸ್ ಆರೋಪಿಯನ್ನು  ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ..