ಸಿಂದಗಿ: ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುವುದು. ಕ್ರೀಡಾಂಗಣದಲ್ಲಿ ಆಟ ಆಡುವುದರ ಮೂಲಕ ಮಕ್ಕಳು ದೈಹಿಕವಾಗಿ ಬಲಿಷ್ಠರಾಗುವರು ಯಾವುದೇ ಅನಾರೋಗ್ಯಕ್ಕೆ ಒಳಗಾಗದೆ ಮಾನಸಿಕ ವಿಕಾಸಕ್ಕೆ ಪ್ರೇರೆಪಿಸುವುದು ಎಂದು ದೈಹಿಕ ಶಿಕ್ಷಕ ಸಂಗಮೇಶ ಮಲೇದ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದ ಭೀಮಾ ಶಾಲೆಯಲ್ಲಿ ಹಮ್ಮಿಕೊಂಡಿರುವ ಕ್ರೀಡಾ ಮಹೋತ್ಸವದಲ್ಲಿ ಕ್ರೀಡಾಜ್ಯೋತಿಗೆ ಚಾಲನೆ ನೀಡಿ ಅವರು ಮಾತನಾಡಿ, ಇನ್ನು ಗುಂಪು ಆಟಗಳಾದ ಖೋಖೋ, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್ ಆಡುವುದರ ಮೂಲಕ ಮಕ್ಕಳಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಯುವುದರ ಜೊತೆಗೆ ದೈಹಿಕವಾಗಿ ಗಟ್ಟಿಮುಟ್ಟಾಗುವರು ಎಂದರು.
ಶಾಲೆಯ ಪ್ರಾಂಶುಪಾಲೆ ಹೀಮಾಬಿಂದು ಮಾತನಾಡಿ, ಮಕ್ಕಳು ಸರ್ವೂತೋಮುಖ ಅಭಿವೃದ್ದಿಗಾಗಿ ಪಾಠದ ಜೊತೆಗೆ ಆಟವನ್ನು ಆಡುವುದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗುವುದು ಎಂದು ಹೇಳಿದರು,
ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೊಳ್ಳೂರ ಸಹನಿರ್ದೇಕರಾದ ಡಾ. ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಉಪಸ್ಥಿತರಿದ್ದರು.