ಗಿರಿಯಾಲ ಕೆಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರೈತ ಬಂಧು ಪ್ಯಾನಲ್ ನ ಎಲ್ಲ ಸದಸ್ಯರು ಈ ಮೊದಲಿನ ಆಡಳಿತ ಮಂಡಳಿಯನ್ನು ಸಂಪೂರ್ಣ ಸೋಲಿಸಿ ಅಚ್ಚರಿಯದ ಜಯ ಸಾಧಿಸಿದ್ದಾರೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬಸವರಾಜ ಗಿ. ಇಟಗಿ, ಬಸವರಾಜ ರುದ್ರಪ್ಪ ಆರೇರ, ಬಸಪ್ಪ ಶಿವನಪ್ಪ ಇಟಗಿ, ಮಹಾಂತೇಶ ಜಿಗದಾಡಿ, ಮೇಲಗಿರಿ ಇರಕಿನಕೊಪ್ಪ, ಸಾಲಗಾರ ಮಹಿಳಾ ಕ್ಷೇತ್ರದಿಂದ ಶ್ರೀಮತಿ ನಾಗವ್ವ ವೇ.ಗೌಡರ, ಶ್ರೀಮತಿ ವೀರವ್ವಾ ಬ .ಇಟಗಿ, ಸಾಲಗಾರ ಹಿಂದುಳಿದ ಬ ವರ್ಗದ ಅಭ್ಯರ್ಥಿ
ಕಲ್ಲಪ್ಪ ಇಟಗಿ,ಸಾಲಗಾರೇತರ ಅಭ್ಯರ್ಥಿ ಮಹಾಂತೇಶ ಬ. ಇಟಗಿ ಅವರು ಅತ್ಯಂತ ಹೆಚ್ಚಿನ ಮತ ಪಡೆದು ಜಯ ಸಾಧಿಸಿದರು.
ಫಕೀರ್ ಯ. ನಾಯ್ಕರ್ ಬ ವರ್ಗ, ಹನುಮಂತ ಸವಳಿ ಪರಿಶಿಷ್ಟ ಪಂಗಡ, ಮಲ್ಲಪ್ಪ ಕುರಿಮನಿ ಪರಿಶಿಷ್ಟ ಜಾತಿ, ಮೂವರೂ ಅವಿರೋಧ ಆಯ್ಕೆಯಾದರು ವಿಜೇತರಿಗೆ ಹಿರಿಯರು ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಆಡಳಿತ ನಡೆಸಲು ಹೇಳಿ ಅಭಿನಂದನೆಗಳನ್ನು ಸಲ್ಲಿಸಿದರು.