ಸಿಂದಗಿ: ಗಿಡ ಮರಗಳು ಪರಿಸರದ ಜೀವನಾಡಿಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂಭಾಗ ಪರಿಸರ ದಿನಾಚರಣೆ ಮಾಡುವ ಮೂಲಕ ಮಾತನಾಡಿದ ಅವರು ಭೂಮಿ ತಾಯಿಯ ಒಡಲಲ್ಲಿ ಗಿಡ ಮರ ಬೆಳೆಸಿದರೆ ನಮಗೆ ಶುದ್ಧವಾದ ಗಾಳಿ, ಸಕಾಲಕ್ಕೆ ಮಳೆ ಬೆಳೆ ಹಾಗೂ ಪರಿಸರದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದು, ಎಲ್ಲೆಡೆ ಗಿಡ ಮರಗಳನ್ನು ಬೆಳೆಸುವ ಪರಿಪಾಠ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮರ ಗಿಡಗಳು ಮನುಷ್ಯನಿಗೆ ಶುದ್ಧ ಗಾಳಿ ನೀಡುತ್ತವೆ. ನೆರಳು, ಹಣ್ಣು ನೀಡಿ ನೆರವಾಗುತ್ತವೆ ಆದರೆ ಮನುಷ್ಯ ದುರಾಸೆಯಿಂದ ಪರಿಸರವನ್ನು ಹಾಳುಮಾಡಿ ನಾಶ ಮಾಡುತ್ತಿದ್ದಾನೆ ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದರು.
ಶಿಕ್ಷಕರ ಸಂಘದ ನಿರ್ದೇಶಕ ರಾಯಪ್ಪ ಇವಣಗಿ ಮಾತನಾಡಿ, ಅರಣ್ಯ ನಾಶದಿಂದ ಜೀವ ಸಂಕುಲಕ್ಕೆ ಮುಂದಿನ ದಿನಗಳಲ್ಲಿ ಅಪಾಯವಿದೆ. ಹಾಗಾಗಿ ಅರಣ್ಯ ನಾಶ ತಡೆಯಬೇಕು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ದೇವರ ಹಿಪ್ಪರಗಿ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲಿಕಾರ, ವ್ಯವಸ್ಥಾಪಕರಾದ ಎ ಎಂ ಗಜಾಕೋಶ, ಎಂ ಎಸ್ ಚೌಧರಿ, ಬಸವರಾಜ ಸೋಮಪುರ, ಲಕ್ಷ್ಮಣ ಸೊನ್ನ, ಡಿ ಎಮ್ ಮಾಹೂರ, ಪಿ ಎಸ್ ಅಡಗಲ್ಲ, ಎಸ್ ಎಂ ಕಪನಿಂಬರಗಿ, ವಾಯ್ ಎಂ ಬಿರಾದಾರ, ಎಸ್ ಎ ಬಿರಾದಾರ, ಬನ್ನೆಪ್ಪ ದೇವರಮನಿ, ಎ ಎಸ್ ಯತ್ನಾಳ, ವ್ಹಿ ಡಿ ಬಮ್ಮನಳ್ಳಿ, ಗುಲಾಬ ನಧಾಪ, ಎಫ್ ಎನ್ ನದಾಫ, ಎಫ್ ಜೆ ಬಗಲಿ, ಸಿ ಜಿ ಹೆಬ್ಬಾಳ, ಎ ಪಿ ಸೋನ್ಯಾಳ, ಎ ಎಸ್ ಚಾಂಬಾರ, ಆರ್ ಎಸ್ ಕೊಪ್ಪಾ, ಶ್ರೀಕಾಂತ ಹೂವಿನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.