- Advertisement -
ಕವಿತೆಯ ಅಳಲು
ಸಾಲ ಮಾಡಿ ಕವನ ಸಂಕಲನ
ಪ್ರಕಟಿಸಿದ ನಮ್ಮ ಕವಿಗೆ
ಸಾಹಿತ್ಯ ಸಮ್ಮೇಳನದಲ್ಲಿ
ಶಾಲು ಹೊದಿಸಿ ಸನ್ಮಾ ನಿಸಿ
ಹಾಡಿ ಹೊಗಳಿದರು
ಮನೆಯಲ್ಲಿ ಮಡದಿ ರೇಗಿದಳು
ಹೊದ್ದುಕೊಂಡು ಶಾಲು ಬೆಚ್ಚಗೆ
ಮಲಗಿರಿ ರೂಮಲ್ಲಿ ತೆಪ್ಪಗೆ
ಮತ್ತೆ ಕವಿತೆ ಬರೆದರೆ
ನಾ ಹೋಗುವೆ ತೌರಿಗೆ !
ಹೆಂಡತಿ ಬಿಟ್ಟರೂ ನಮ್ಮ ಕವಿ
ನನ್ನನ್ನು ಬಿಡುವನೆ
ಬಿಡದೆ ಬರೆದನು ಬಂಡಾಯ ಕವಿತೆ
ಮುನಿದು ಮಡದಿ ತವರಿಗೆ
ನಮ್ಮ ಕವಿ ಅಡಿಗೆ ಮನೆ ಒಳಗೆ !
ಕೋಸಂಬರಿಯಿಂದ ಕಾದಂಬರಿ ವರೆಗೆ
ಅಡಿಗೆ ಮನೆ ಸಾಹಿತ್ಯ ಬರೆದನು
ಮಡದಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸಿದನು
ಬಿಸಿ ಬಿಸಿ ದೋಸೆಯಂತೆ ಖರ್ಚಾಗಿ
ಮಡದಿ ಬೆಳಕಿಗೆ ಬಂದಳು
ನಮ್ಮ ಕವಿ ಕತ್ತಲೆಗೆ ಸರಿದನು
ಕವಿಯ ಮಡದಿ ಈಗ ಸಮಾಜ ಸುಧಾರಕಿ
ನಮ್ಮ ಕವಿ ಅಡಿಗೆ ಮನೆ ಸುಧಾರಕ !
—-
ಗೊರೂರು ಅನಂತರಾಜು, ಹಾಸನ
9449462879
ವಿಳಾಸ: ಹುಣಸಿನಕೆರೆ ಬಡಾವಣೆ
29ನೇ ವಾರ್ಡ್,
3 ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201