ಕವನ :ಮುಸುಕು ಮಾಯೆ

Must Read

ಮುಸುಕು ಮಾಯೆ

ಅದು ಮುಸುಕು ಮಾಯೆ
ನಗೆ ಮಾರಿ
ಹಿಂದೆ ಹೋಗಲು ಬೇಡ
ಹೌಹಾರಿ
ಹರುಷದ ಹಾದಿಯಲಿ
ಬೆಸೆದ ನೇಹದ
ಮನೆ ಹಾರಿ
ಹೋಗಲು ಬೇಡ
ಕೌಮಾರಿ

ತನುವು ಸೊಂಕಿಸಬೇಡ
ಕಂಗಳಲಿ ಕರೆಯಬೇಡ
ಕರುಣೆ ಇಲ್ಲದ ತಾಯೆ
ಅದು ಮಾಯೆ
ಜಾತಿ ಕುಲ ಗೋತ್ರದ
ತಿಳಿ ಅರಿವು
ತಡ ರಾತ್ರಿ

ಬೆಳಗು ಹರಿದರೆ ಸಾಕು
ಅದು ಮಾಯೆ ಜಾರಿ
ಕುದುರೆ ಏರಲು ಬೇಡ
ಸವಾರಿ ಮಾಡಲು ಬೇಡ
ಲಂಗು ಲಗಾಮು ಇಲ್ಲದೆ
ತಿರುಗುವ ಮಾಯದ
ಮೊಗ ಅದು ತಿಳಿ ನಡೆ
ನೀ ನಾರಿ

ಕಲಕುವ ಕಿವಿ ಮಾತು
ಜಾಡಿ ಹೇಳಲು ಬೇಡ
ಕೇಳಿದರೂ ಕಿವುಡು
ನೀ ಆಗಿ ಬಿಡು
ಅದು ಮಾಯೆದ ಮುಸುಕು
ನೀ ಪರನಾರಿ

ಪರಮ ಪತಿವ್ರತೆ ಸಾವಿತ್ರಿ
ಪದ ಕಾವ್ಯ ಕವನದಲಿ ನೀ ಜಾರಿ
ಸುಖದ ಬಾಳಿಗೆ ನೀ
ಜಾರಿ ಹೋಗಲುಬೇಡ
ಅದು ಮಾಯದ ಮುಸುಕಿನ
ನಗಾರಿ

ಸದ್ದು ಗದ್ದಲದೊಳಗೆ
ಸುದ್ದಿಯಾಗಿ
ರದ್ದಿಯಾಗಲು ಬೇಡ
ನೀ ಒಂದು ಪದ ಕಾವ್ಯದ
ಮಹಾಕಾವ್ಯ
ನೀ ನಾರಿ
___________
ಡಾ ಸಾವಿತ್ರಿ ಕಮಲಾಪೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group