ನಗಬೇಕು
ನಗಬೇಕು ಅಳುವ ಮರೆತು
ಮುಂದೆ ಕಾದಿದೆ ಜೀವನ
ಕಷ್ಟ ನಷ್ಟ ಸಾವು ನೋವು
ದೈವ ವಿಧಿಸಿದ ಬಂಧನ
ಅತ್ತು ಅತ್ತು ಬಿಕ್ಕಬೇಡ
ಚಿಮ್ಮಲೊಮ್ಮೆ ಚಿಲುಮೆ
ಎಲೆ ಉದುರಿದ ಕಾಂಡದಿ
ಹಸಿರು ಚಿಗುರು ಚೇತನ
ನಕ್ಕುಬಿಡು ದುಃಖ ಮರೆತು
ಸೊಗಸು ಸಂತಸ ಸವಿ ಮನ
ದುಗುಡ ದೂರವಾಗಿ ತೊಲಗಲಿ
ಶಾಂತಿ ಪ್ರೀತಿ ಪಾವನ
ಕಿಟಕಿಯಾಚೆ ರವಿಯ ಬೆಳಕು
ಸಂಜೆ ಚಂದ್ರನ ಸ್ಪಂದನ
ನಗೆಯು ಮುಖದಿ ಮಾಸದಿರಲಿ
ಬಾಳು ನಿತ್ಯ ನೂತನ
_________________________
ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

