ಕವನ : ಭಾವೈಕ್ಯತೆಯ ಕೊಪ್ಪಳದ ಮಹಾಪರಿಷೆ

Must Read
ಭಾವೈಕ್ಯತೆಯ ಕೊಪ್ಪಳದ ಮಹಾಪರಿಷೆ
ಕಲ್ಯಾಣದ ಉತ್ತರ ಕರ್ನಾಟಕದಲಿ
ಕೊಪ್ಪಳ ಆರಾಧ್ಯದೇವರ ಸಾಮರಸ್ಯದ
ಮಹಿಮೆಯನು ಸಾರುತಲಿಹುದು
ಸಾಗರದೋಪಾದಿಯ ಮಹಾಪರಿಷೆಯು.

ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು
ಸರಳತೆ ಸಾತ್ವಿಕತೆಯ ಪ್ರತಿರೂಪವು
ದಕ್ಷಿಣ ಭಾರತದ ಮಹಾಕುಂಭಮೇಳವು
ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು.

ಅರಿವಿನ ತ್ರಿವಿಧ ಮಹಾದಾಸೋಹವು
ಸರ್ವರ ಜಾಗೃತಿ-ಚಿಚ್ಛಕ್ತಿಯ ಪ್ರೇರಕವು
ಗ್ರಾಮೀಣ ಸೊಗಡಿನ ಆಟೋಟವು

ಶುಚಿ-ರುಚಿ ಸಾತ್ವಿಕ ಆಹಾರವು.

ಕಣ್ಮನ ಸೆಳೆಯುವ ಚಿತ್ತಚಿತ್ತಾರದ
ಬೆಳಕಿನ ದೀಪಗಳ ರಂಗೋಲಿಯು.
ಆಯಸ್ಕಾಂತದಂಥ ಕಲಾಸಾಗರೋತ್ಸವವು
ವಿಶೇಷಚೇತನರ ಕಲ್ಯಾಣ ಮಹೋತ್ಸವವು.

ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು
ಮನಾಕರ್ಷಕ ಮನರಂಜನೆಯು.
ದೇಶಿ ಶೈಲಿಯ ವೇಷಭೂಷಣಗಳು
ಜಾನಪದರ ವಿಧವಿಧ ಕ್ರೀಡೆಗಳು.

ದೇಶಿ ಸಂಸ್ಕೃತಿಯ ಹಿರಿಮೆ-ಗರಿಮೆಯನು
ವಿಶ್ವಕೆ ಸಾರಿಸಾರಿ ಅರುಹುತಲಿಹವು.
‘ಮನುಕುಲಂ ತಾನೊಂದೇ ವಲಂ’
ಭಾವೈಕೖತೆ ಪ್ರತಿಬಿಂಬಿಸುವಂತಿಹವು.

ಸರ್ವರಿಗೆ ಸ್ಪೂರ್ತಿಯ ಸೆಲೆಯು
ಉತ್ಸಾಹ-ಪ್ರೋತ್ಸಾಹದ ಕಾರಂಜಿಯು
ಹೃದಯಾನಂದ ಕಣ್ಮನಕೋರೈಸುವ                        ಚೈತನ್ಯದ ಚಿಲುಮೆಯಂತಿಹುದು.

ಸಪ್ತಸಾಗರದೋಪಾದಿಯಲಿಹುದು
ಸದ್ಭಕ್ತರ ಆರೋಗ್ಯ ಮಹಾಮೇಳವು
ಕೊಪ್ಪಳದ ಗವಿಸಿದ್ದೇಶ್ವರರ ಮಹಾಪರಿಷೆಯ
ವೈಭವವನು ಬಣ್ಣಿಸಲು ಪದಗಳೇ ಸಾಲವು.
*******

-ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.
ಕವಯಿತ್ರಿ, ಸಾಹಿತ್ಯಚಿಂತಕರು.
ಗದಗ. 

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group