ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

Must Read

ಸಮಾನತೆಯ ಬೆಳದಿಂಗಳ ಪಲ್ಲವಿ

ಭಾರತಾಂಬೆಗೆ ಹೊನ್ನ
ಕಿರೀಟವಿದು
ಸರಳ ಸಂವಿಧಾನ
ನಮ್ಮ ಸಂವಿಧಾನ

ಪೀಠಿಕೆಯ ಪರಿಧಿಯಲಿ
ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ
ಸಾರ್ವಭೌಮತೆ,ಗಣತಂತ್ರ
ನ್ಯಾಯ, ಸಮಾನತೆ
ಸ್ವಾತಂತ್ರ್ಯದ ದುಂದುಭಿ
ಜೀವದಾಯಿನಿ ಇದು
ಭಾರತದ ಪಾಲಿಗೆ
ಮುಕ್ತಿದಾಯಿನಿ ಇದು
ದಾಸ್ಯದ ಸಂಕೋಲೆಗೆ
ನಮ್ಮ ಸಂವಿಧಾನ
ನಮಗೆ ಸುವಿಧಾನ

ಲಿಖಿತವೂ ಧೀರ್ಘವೂ
ಭಾರತಕ್ಕಿದು ಮಾರ್ಗವು ಅಸಮಾನತೆಯ ಇರುಳಿಗೆ
ಶ್ರೇಷ್ಠ ಶಿಲ್ಪಿ ಅಂಬೇಡ್ಕರ
ಚಿಂತನೆಗಳ ಸಿರಿದೀಪವು
ಶತಮಾನಗಳ ದಾಸ್ಯದ
ಕತ್ತಲೆಯ ಅಳಿಸಿ
ದಿವ್ಯ ಚೇತನದ ಮೌಲ್ಯ ಬೆಳೆಸಿ
ಭವ್ಯ ಭಾರತಕಿದುವೆ ಭದ್ರ ಬುನಾದಿ
ನಮ್ಮ ಸಂವಿಧಾನ,ನಮಗೆ ಸುವಿಧಾನ

ಪವಿತ್ರ ಪದಪುಟಗಳ
ಸ್ವೀಕಾರ 1949 ರಂದು
ಜಾರಿಯಾಯಿತಿದು ಕೈ ಬರಹದೊಂದಿಗೆ 1950
26 ಜನವರಿಯಂದು
ನಿಯಮ ನಕ್ಷತ್ರಗಳ ಗುಂಪು
ಹಿಂದಿ,ಆಂಗ್ಲ ಭಾಷೆಯ ಕಂಪು
ಇದರ ಮೂಲ ಪ್ರತಿಗಳು
ಹೀಲಿಯಮ್ ರಕ್ಷೆಯಲಿ
ಇದೆ ಇಂದಿಗೂ ಸಂಸತ್ತಿನ ಗ್ರಂಥಾಲಯದಲಿ
ಎರವಲು ಅಂಶಗಳ
ಪವಿತ್ರ ಸಂಗಮವಿದು
ಶ್ರೇಷ್ಠವಿದು,ಪರಮಶ್ರೇಷ್ಠವಿಹುದು
ನಮ್ಮ ಸಂವಿಧಾನ,
ನಮಗೆ ಸುವಿಧಾನ…

ದಾಸ್ಯದ ಸಂಕೋಲೆಯಲಿ
ದೇಶ ನೆಲೆ ಅರಸುತ್ತಿರುವಾಗ
ಮಿಂಚುಹುಳುವಿನಂತೆ
ಮಿಣುಕು ಅಂಚುಗಳು
ವಿಧಿಗಳು,ಭಾಗಗಳು,
ಅನುಚ್ಚೇದ,ತಿದ್ದುಪಡಿಗಳು
ಮೂರು ಅಂಗಗಳ
ಪರಿಮಿತಿ ಪರಿಧಿಯಲಿ
ಹಕ್ಕು, ಕರ್ತವ್ಯ ಗಳ
ಸಚೇತನ ವಿವರಣೆ
ಕೂದಲೆಳೆಯಷ್ಟು ಕೊಂಕಿಲ್ಲ,ಕೊಸರಿಲ್ಲ
ಜವಾಬ್ದಾರಿಗಳ ವಿವರಣೆಗೆ…
ನಮ್ಮ ಸಂವಿಧಾನ,ನಮಗೆ ಸುವಿಧಾನ

ವಿಧಿ-ಭಾಗ ,ಅನುಸೂಚಿ, ಜೋಡಣೆ
ಸರ್ವರಿಗೂ ಸಮವೆನಿಪ
ಸುಧೀರ್ಘ ವಿವರಣೆ
ಅನಿರ್ವಾಹ ಬಂಧವಿದು
ದೇಶ ನಡೆಸುವ ದಾರಿಗೆ
ಉಪಮೆ, ಉತ್ಪ್ರೇಕ್ಷೆ ಇಲ್ಲ ಇದಕೆ
ಹೂವ ಜೀವಂತಿಕೆಯ
ದೇಶ ದಿಕ್ಸೂಚಿ
ನಮ್ಮ ಸಂವಿಧಾನ,
ನಮಗೆ ಸುವಿಧಾನ

ಶ್ರೀಮತಿ ಮೀನಾಕ್ಷಿ ಸೂಡಿ
ಕವಯತ್ರಿ ದೇವಗಾಂವ
ಚನ್ನಮ್ಮನ ಕಿತ್ತೂರು
ಬೆಳಗಾವಿ ಜಿಲ್ಲೆ
ಫೋನ್ 8073946046

LEAVE A REPLY

Please enter your comment!
Please enter your name here

Latest News

ಲೇಖನ : ಊರು ತೇರು ಹಳೆಯ ನೆನಪುಗಳು ನೂರು

ಹೇಮಾವತಿ ನದಿ ಗೊರೂರು ಬಳಿ ಹಾಸನ ಮತ್ತು ಅರಕಲಗೊಡು ತಾಲ್ಲೂಕನ್ನು ಸೀಮಾ ರೇಖೆಯಾಗಿ ಬೇರ್ಪಡಿಸಿದೆ. ಗೊರೂರು ಬಳಿ ಸೇತುವೆ ಕಟ್ಟುವ ಮೊದಲು ಯೋಗಾನೃಸಿಂಹಸ್ವಾಮಿ ದೇವಸ್ಥಾನದ ಬಳಿ...

More Articles Like This

error: Content is protected !!
Join WhatsApp Group