- Advertisement -
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
———————————–
ಇಲ್ಲವಾಗಬಹುದು ಒಂದು ದಿನ.
ಎಲ್ಲವೂ ನಶ್ವರ ಮಾಯಾ ಮನ
ಸಂಘರ್ಷ ಹಸಿವು ಸ್ತಬ್ದವಾಗುತ್ತವೆ.
ಒಳಗಿನ ಬಡಿತ ನಿಲ್ಲಬಹುದು .
ಮಾತು ಮೌನವಾಗಬಹುದು.
ಕಣ್ಣೊಳಗಿನ ಬೆಳಕು ಆರಬಹುದು.
ಉಸಿರು ಬಯಲ ಕೂಡುವುದು
ಆದರೆ ನಾನು………..
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
ಸುದ್ಧಿಯಾಗುತ್ತೇನೆ ನಿಮಗೆ.
ಮುದ್ದು ಮಾತಾಗುತ್ತೇನೆ ನಿನಗೆ .
ನನ್ನ ಭಾವ ಬುತ್ತಿ ಬಿಚ್ಚಿ
ತಿನಿಸುವೆ ಗೆಳತಿ ನಾನಿರುವವರೆಗೆ.
ನಿನ್ನ ಬಣ್ಣದ ಕನಸಿನ ಪತಂಗಗಳ
ಹಾರಿ ಬಿಡುವೆ ಪ್ರೀತಿಯ ಗಾಳಿಯಲಿ.
ಮುಗಿಲೆತ್ತರೆ ಮಿಗಿಲೆತ್ತರೆ ಹಾರಲಿ.
ಮೋಡದಾಚೆಯ ರವಿ ಶಶಿ ಚುಕ್ಕೆಗಳಿಗೆ
ಮುಟ್ಟಲಿ ನಮ್ಮ ಸ್ನೇಹ ಸಂದೇಶವು.
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
ಸುದ್ಧಿಯಾಗುತ್ತೇನೆ ನಿಮಗೆ.
ಮುದ್ದು ಮಾತಾಗುತ್ತೇನೆ ನಿನಗೆ
———————————-
ಡಾ.ಶಶಿಕಾಂತ ಪಟ್ಟಣ.ಪೂನಾ