ಜಗವೆ ಕೂಡಲ ಸಂಗಮ
ಬಸವ ಬಳ್ಳಿ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು, ನಡೆಯು ಲಿಂಗ
ನುಡಿಯೇ ಅಮರ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು, ನಡೆಯು ಲಿಂಗ
ನುಡಿಯೇ ಅಮರ ಜಂಗಮ
- Advertisement -
ಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ
ಲಿಂಗ ಮಜ್ಜನ ಪಾದದುದಕ
ಅರಿವು ಸ್ಪೂರ್ತಿಯ ಸಿಂಚನ
ಸತ್ಯವೆಂಬುದೆ ನಿತ್ಯ ಪಠಣ,
ನೀತಿ ಪಾಠದ ಮಂಥನ
ನೆಲದ ಮೇಲೆ ಬೆಳಕು ಚೆಲ್ಲಿದೆ
ಜಗದಿ ನಿತ್ಯ ವಚನ ಚಿಂತನ
ಒಂದು ಮಾಡಿದ ಹಿರಿದು ಕಿರಿದು
ಸಮತೆವೆಂಬ ದೀಪವು
ಉಚ್ಚ ನೀಚ ಬೇಧ ಹರಿಯಿತು
ಅದುವೇ ಧರ್ಮ ಧೂಪವು
- Advertisement -
ಗುಡಿಗಳೆಲ್ಲ ನಲುಗಿ ಹೋದವು
ವೇದ ಶಾಸ್ತ್ರ ಪುರಾಣವು
ದಲಿತ -ಮಹಿಳೆ -ಅಸಹಾಯಕರು
ಬಸವ ಧರ್ಮದ ಒಡೆಯರು
ಜಿಡ್ಡುಗಟ್ಟಿದ ಕಟ್ಟು ಕಳಚಿತು
ಮುಕ್ತ ವಿಶ್ವದ ಪ್ರೇಮವು
ಬಸವನುಸಿರೆ ದಿವ್ಯ ಮಂತ್ರವು
ಲಿಂಗವಂತ ಸ್ವತಂತ್ರವು
ಡಾ. ಶಶಿಕಾಂತ. ರು. ಪಟ್ಟಣ -ಪೂನಾ