ಕವನ: ಸ್ನೇಹಿತರ ದಿನಾಚರಣೆ

0
466

ಸ್ನೇಹಿತರ ದಿನಾಚರಣೆ

ಇಂದು ನಿನ್ನೆಯದಲ್ಲ ಈ ಸಂಭ್ರಮ
ಸ್ನೇಹ ಎನ್ನುವ ಭಾವವೇ ಅನುಪಮ|

ಎಲ್ಲ ಸಂಬಂಧಗಳಿಗಿಂತ ಮಿಗಿಲು
ಸ್ನೇಹವೆಂಬುದು ಸದಾ ತೆರೆದ ಬಾಗಿಲು||

ಮನಕೆ ಮುದ ತರುವ ಸಂಬಂಧ
ಸುಖ ದುಃಖಗಳ ಅನುಬಂಧ|

ಹಿಗ್ಗಿ ಕುಣಿವ ಮನಸಿನಾನಂದ
ಊಹಿಸಿಕೊಳುವುದೇ ಬಲು ಚೆಂದ||

ಭಾವನೆಗಳಿಗೆ ಬೆಲೆ ಕೊಡುವ ನೆಲೆ
ಹಂಚಿಕೊಳ್ಳಲು ಬೇಕಾಗಿಲ್ಲ ಯಾವ ಕಲೆ|

ಕಟ್ಟಲಾಗಲ್ಲ ಈ ಸಂಬಂಧಕೆ ಯಾವುದೇ ಬೆಲೆ
ಇದುವೇ ಸ್ನೇಹ ಸಂಬಂಧ ಭಾವನೆಗಳ ಬಲೆ||

ಪ್ರತೀ ಕ್ಷಣವೂ ಮನಸಿನಾಳದಲಿ ಹರುಷದ ಬುಗ್ಗೆ
ಒಡನಾಟದ ಕಡಲಲಿ ಈಜಿ ಗೆಲುವ ಆ ಘಳಿಗೆ|

ರಕ್ತ ಸಂಬಂಧದಲಿ ಇರದ ಈ ಸಲುಗೆ
ತನ್ನದೇ ಛಾಪು ಮೂಡಿಸಿದೆ ಈ ಸ್ನೇಹದಾ ಬೆಸುಗೆ||


ಗುರುದೇವಿ ಮಲಕಣ್ಣವರ.
ಸಿ ಆರ್ ಪಿ.ತಲ್ಲೂರ.