ಕವನ: ಭಕ್ತಿ ಭಾವ

Must Read

ಭಕ್ತಿ ಭಾವ

ಭಜನೆ ಎಂದರೆ ಭಗವಂತನ ಧ್ಯಾನ ಶಿವಸ್ಮರಣೆಯ ತಪಸ್ಸು

ಕಲಿಯುಗದಿ ಭಗವಂತ ಒಲಿಯುವನು ಭಜನೆಗೆ ನಾಮಸ್ಮರಣೆ ಎಂಬುದು ಭಗವಂತನ ಸ್ತುತಿ ಗೀತೆ.

ಪದಗಳಲಿ ಬೆರೆತು
ಭಾವಕ್ಕೆ ರಾಗ ಸೇರಲು ನಾವದರೊಳು ಸ್ಮರಿಸುತಿಹ ಭಗವಂತನ ನಾಮಸ್ಮರಣೆ.

ಭಜನೆಯಿಂದಲಿ ಮೂಡಿ ಭಕ್ತಿಯ ಭಾವಪರವಶತೆಯ ತರಂಗದೊಳು ರೂಪಾತರದಿ ಭಕ್ತಿಯ ಪ್ರಕಟಣ ಭಜನೆಯಿಂದಾಗುವುದು ಭಕ್ತಿ

ಭಗವಂತನ ಭಕ್ತಿ ಎಂಬುದು
ಶ್ರೇಷ್ಠವಾದ ಶಕ್ತಿ.
ಭಗವಂತನ ಮೇಲಿನ ನಂಬಿಕೆ. ನಮ್ಮ ಇಷ್ಟಾರ್ಥಗಳ ಸಿದ್ಧಿ.

ಭಾವಪರವಶದ ಧ್ಯಾನದಿ ಅಂತರ್ಮುಖಿಗಳಾಗುತಲಿ ಜೀವಾತ್ಮ ಪರಮಾತ್ಮನ ನಡುವೆ ಅನುಸಂಧಾನ ಸಾಧಿಸುವುದೀ ಭಕ್ತಿ

ಭಕ್ತಿ ಮಾರ್ಗದೊಳು ಭಜನೆ ಭಗವಂತನ ಒಲಿಸುವ ಪರಿ ಸಂಪ್ರೀತಿಗೊಳಿಸಿ ನಾಮಸ್ಮರಣದಿ ನಿಜ ಭಕ್ತಿ

ಮನಸ್ಸುಗಳ ಅಂತರಾಳದ ಭಕ್ತಿ ಭಾವದಿ ಮೂಡಿ ನೈತಿಕತೆ. ಅಗೋಚರ ಸ್ಥಿತಿಯೊಳು
ಸಕಲ ಜೀವರಾಶಿಗಳ ಸೃಷ್ಟಿ ಸ್ಥಿತಿ.
ಲಯ ನಿಯಂತ್ರಕ ಭಗವಂತ

ದೇವರಸ್ತುತಿಗೆ ಒದಗಿ ಮುಕ್ತಿ ಹರಿ ಭಜನೆ ಮಾಡಿರೋ ನಿರಂತರ ಶಿವಸ್ತುತಿ ಮಾಡಿರೋ ನಿರಂತರ. ಕೀರ್ತನೆ ಹಾಡಿರೋ ಸದಾ


ಬಬಿತಾ. ಆರ್. ಕೊಲ್ಲಾಜೆ
ಕೊಕ್ಕಡ-574198
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group