- Advertisement -
ದುಂಬಿಗೆ…
ನೀನೇನೋ ನನ್ನ ಮುಖಾರವಿಂದವ ನೋಡಿ, ಝೇಂಕರಿಸುತಿರುವೆ….
ಈ ಸುಮವ,ಮುಟ್ಟಲು ಕಾತರಿಸುತಿರುವೆ
- Advertisement -
ಎನ್ನ ಸುಗಂಧದಲಿ ಒಂದಾಗಿ
ಬೆರೆಯಲು ಬಯಸುತಿರುವೆ…….
ಎನ್ನಲಿ ಅಪರಿಮಿತ ಉಲ್ಲಾಸ , ಸುಖ
- Advertisement -
ಕಾಣುತಿರುವೆ…..
ಪಕಳೆ ಸರಿಸಿ ಜೇನು ಹನಿಗಾಗಿ
ತವಕಿಸುತಿರುವೆ…..
ಎನ್ನನುಭವ ತಿಳಿಯುವ ಕುತೂಹಲದಲಿ ನೀನಿರುವೆ……
ಎಂತು ಹೇಳಲಿ ನಿನ್ನ ತುಂಟಾಟವ
ಭಾವಪರವಶ ಕೇಳಿ ನಿನ್ನ ಝೇಂಕಾರವ
ನೀ ಬಂದ ಘಳಿಗೆಯಿಂದ ಅರಳಿ
ಕಂಡೆ ಹೊಸ ಚೇತನವ….
ಸೋತು ಶರಣಾದೆ ಕಂಡು ನಿನ್ನ ನಿಷ್ಕಲ್ಮಶ ಭಾವವ…..
ಮಧುಪಾತ್ರೆಯೊಂದಿಗೆ ಸನ್ನದ್ದವಾದೆ
ಉಣಬಡಿಸಲು ಮಧುಪಾನವ…..
ಕಾದು ಸೋಲುತಿರುವೆ, ನೀ ಬರದ ದಾರಿಯ….
ಶಬರಿಯಂತೆ, ಬಾಡಿ ಬೆಂಡಾಗುತಿರುವೆ ಸಮರ್ಪಣಾಭಾವದಿ
ಲೀಲಾ ರಜಪೂತ್, ಹುಕ್ಕೇರಿ