ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಬಸವರಾಜ ಬುಳ್ಳಾ ವಾಗ್ದಾಳಿ

0
373

ಆ್ಯಂಕರ.. ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರನ್ನು ಹ್ಯಾಂಡಿಕ್ಯಾಪ್  (ಅಂಗವಿಕಲರಾಗಿ) ಮಾಡಿದ್ದಾರೆ. ಪ್ರಧಾನಿ ವಿದೇಶ ಪ್ರವಾಸ ಮಾಡುವಾಗ ಯಾಕೆ ನಮ್ಮ ಪತ್ರಕರ್ತರನ್ನು ಕರೆದುಕೊಂಡು ಹೋಗಿಲ್ಲ ಇವರ ಬಂಡವಾಳವನ್ನು ಇಡೀ ಜಗತ್ತನ್ನು ನೋಡುತ್ತದೆ ಎಂಬ ಭಯ ನಮ್ಮ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬುಳ್ಳಾ ವಾಗ್ದಾಳಿ ಮಾಡಿದರು.

ಮಾಧ್ಯಮದವರೊಡನೆ ಮಾತನಾಡೊದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಎಲ್ಲಾ ಪತ್ರಕರ್ತರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಇವರು ಪತ್ರಕರ್ತರ ಒಂದು ಭಾಗ ಕಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಿಂದ ಬೀದರ ಲೋಕಸಭಾ ಟಿಕೆಟ್ ಆಕಾಂಕ್ಷೆ ಹೊಂದಿರುವ ಬಸವರಾಜ ಬುಳ್ಳಾ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಗಂಭೀರ ಆರೋಪವನ್ನು ಮಾಡಿದರು.

ಬೀದರ ಜಿಲ್ಲೆ ಔರಾದ ಪಟ್ಟಣದಲ್ಲಿ ಕಾಂಗ್ರೆಸ್  ಮುಖಂಡರಾದ  ಬಸವರಾಜ ಬುಳ್ಳಾ ಅವರು,  ನಾನು ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಅಭ್ಯರ್ಥಿಯಾಗಿದ್ದೇನೆ ಎಂದು ಮಾತಿಗೆ ಆರಂಭಿಸಿ,  ಕಳೆದ 45 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿ ಸಕ್ರಿಯ ಕಾಂಗ್ರೆಸ್ ಮುಖಂಡನಾಗಿ ಸಾಮಾಜಿಕ ಕಾರ್ಯ ದಲ್ಲಿ ನನ್ನನ್ನೇ ನಾನು ತೊಡಗಿಸಿ ಕೊಂಡು ಕಾರ್ಯನಿರ್ವಹಿಸಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನಮ್ಮ  ಮಾಧ್ಯಮದವರನ್ನು ಹ್ಯಾಂಡಿಕ್ಯಾಪ್ (ಅಂಗವಿಕಲರಾಗಿ) ಮಾಡಿ  ನಾವು ಸ್ವಚ್ಛ ಆಡಳಿತ ನಡೆಸುವುದಾಗಿ ಹೇಳುತ್ತಿದ್ದಾರೆ ಮಾಧ್ಯಮದವರನ್ನು ದೂರ ಇಟ್ಟು ಆಡಳಿತ ನಡೆಸುವುದೇ ಪಾರದರ್ಶಕತೆ ಆಡಳಿತಾನಾ ಎಂದು ಪ್ರಶ್ನೆಮಾಡಿ, ದೇಶದ ಆಸ್ತಿ ಮಾರಾಟ ಮಾಡಿದ ಮೋದಿ ವಿಶ್ವಗುರುನಾ ಎಂದು ಮೋದಿಯವರ ವಿರುದ್ದ ಗುಡುಗಿದರು.


ವರದಿ: ನಂದಕುಮಾರ ಕರಂಜೆ, ಬೀದರ