spot_img
spot_img

ಜಾನಪದ ಉಳಿಯಬೇಕಾದರೆ ಪ್ರತಿಯೊಬ್ಬರ ಸಹಕಾರ ಬೇಕು – ಅಮರೇಶ್ವರ ಮಹಾರಾಜರು

Must Read

- Advertisement -

ಮೂಡಲಗಿ : ಆಧುನಿಕ ಕಾಲದಲ್ಲಿ ಮೂಲ ಜಾನಪದ ಕಲೆ ಉಳಿಯಬೇಕಾದರೆ ಪ್ರತಿಯೊಬ್ಬರ ಸಹಕಾರದ ಜೊತೆಗೆ ಪ್ರೋತ್ಸಾಹ ಬೇಕು ಆ ನಿಟ್ಟಿನಲ್ಲಿ ಈ ಭಾಗದ ಜನಪ್ರಿಯ ಶಾಸಕರು ಹಾಗೂ ಕೆ ಎಮ್ ಎಫ್ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ ಎಂದು ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಅವರು ಹಳ್ಳೂರ ಗ್ರಾಮದಲ್ಲಿ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ ಹಾಗೂ ಜಾನಪದ ಜಾತ್ರೆ ಮತ್ತು ಜಾನಪದ ಕಲಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ “ಎಲೆ ಮರೆತ ಕಾಯಿಯಂತೆ” ಇರುವ ಕಲಾವಿದರನ್ನು ಗುರುತಿಸಿ ಇಂತಹ ರಾಜ್ಯ ಮಟ್ಟದ ವೇದಿಕೆ ಕಲ್ಪಿಸಿದ ಕಾರ್ಯಕ್ರಮದ ರೂವಾರಿ, ಹೃದಯವಂತ ಸಂಘಟಕ ಸಿದ್ದಣ್ಣ ದುರದುಂಡಿ ಅವರ ಕಾರ್ಯ ನಿಜವಾಗಲೂ ಶ್ಲಾಘನೀಯ ಎಂದರು. 

ಜಾನಪದ ಕಲೆಯನ್ನು ನಮ್ಮ ಹಿಂದಿನ ಹಿರಿಯರು ಕೂರಿಗಿ ಹೊಡೆಯುತ್ತಾ ರಾಶಿ ಮಾಡುತ್ತಾ, ಮಟ್ಟಿ ಹೊಡೆಯುತ್ತಾ, ಕಣ ಮಾಡುತ್ತಾ, ತಾಯಂದಿರು ಬೆಳಗಿನ ಜಾವ ಎದ್ದು ಬೀಸುವ ಕಲ್ಲಿನ ಪದ, ಶೋಬಾನೆ ಹಲವಾರು ವರ್ಣಮಯ ಹಾಡುಗಳನ್ನು ಹಾಡಿ ಸುಂದರ ಜೀವನ ನಡೆಸುತ್ತಿದರು ಎಂದರು.

- Advertisement -

ಸಾಧಕರಿಗೆ ಜಾನಪದ ಕಲಾರತ್ನ ಪ್ರಶಸ್ತಿ ಪ್ರದಾನ : 

ಹಳ್ಳೂರಿನ ಸತ್ಯಪ್ಪ ಮಹಾರಾಜರು, ಹುಣಶಾಳದ ವಿರೂಪಾಕ್ಷ ಪತ್ತಾರ, ಯಲ್ಪಾರಟ್ಟಿ ಸುರೇಶ ಪೂಜೇರಿ, ಮುತ್ತೂರಿನ ಅಕ್ಷತಾ ಕಾಗೆನ್ನವರ, ಸತ್ತಿ ಬಸವರಾಜ ತಟ್ರಿ, ಜಾನಪದ ಗಾಯಕ ಪರಸು ಕೋಲೂರ, ಹುಬ್ಬಳಿ ಮನೀಶ್ ಶಿಂಧೆ, ಹುಕ್ಕೇರಿಯ ವಿಜಯಲಕ್ಷ್ಮಿ ತಳವಾರ, ಗದಗ ಕೊಣ್ಣೂರಿನ ಪ್ರಕಾಶ ಚಂದನ್ನವರ, ರಾಮದುರ್ಗದ ಚಂದು ಅರಳಿಕಟ್ಟಿ, ಜೋಕಾನಟ್ಟಿಯ ಲಕ್ಷ್ಮಿಬಾಯಿ ಮಾದರ, ಬಾಡಗಿಯ ದುಂಡಪ್ಪ ಪೂಜೇರಿ ಹಾರೂಗೇರಿಯ ರಾಧಿಕಾ ಪತ್ತಾರ, ಚಿಕೋಡಿಯ ಸಾಹಿಲ್ ಕುಮಾರ ಚೌವಾನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ನೀಲವ್ವ ಹೊಸಟ್ಟಿ ವಹಿಸಿದರು. ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷರು ಶ್ರೀಮತಿ ಜಯಶ್ರೀ ಮಿರ್ಜಿ, ಹಳ್ಳೂರ ದೈವದ ಹಿರಿಯರಾದ ಬಸವಣೆಪ್ಪಾ ಡಬ್ಬಣ್ಣವರ, ಶಿವಪ್ಪ ನಿಡೋಣಿ, ಮಲ್ಲಿಕಾರ್ಜುನ ಸಂತಿ, ಭೀಮಸಿ ಹೊಸಟ್ಟಿ, ಬಾಳಗೌಡ ಪಾಟೀಲ, ನಾಗಪ್ಪ ಶಿವಾಪುರ, ಪಿಕೆಪಿಎಸ್ ಅಧ್ಯಕ್ಷರಾದ ಸುರೇಶ ಕತ್ತಿ, ಮಾಜಿ ಅಧ್ಯಕ್ಷರಾದ ಹಣಮಂತ ತೇರದಾಳ, ಕುಮಾರ ಲೋಕಣ್ಣವರ, ಗ್ರಾಮ ಪಂಚಾಯತ ಸದಸ್ಯರಾದ ಮಹದೇವ ಹೊಸಟ್ಟಿ, ನಾರಾಯಣ ಲಕ್ಕವ್ವ ಟಗರಿ, ಬೌರವ್ವ ಹೊಸಟ್ಟಿ, ಬಸಪ್ಪ ಹಡಪದ, ಶಿವಪ್ಪ ಅತಮಟ್ಟಿ, ಪರಶುರಾಮ ಶೇಡಬಾಳ್ಕರ, ಶಾಂತಯ್ಯ ಹಿರೇಮಠ, ಮಹದೇವ ಹೊಸಟ್ಟಿ, ಲಕ್ಕಪ್ಪ ದುರದುಂಡಿ, ಶಂಕರಯ್ಯ ಹಿರೇಮಠ, ಪ್ರಮೋದ ನುಗ್ಗಾನಟ್ಟಿ, ಸದಾಶಿವ ದುರದುಂಡಿ, ಮಹಾರಾಜ ಸಿದ್ದು, ಯಲ್ಲಾಲಿಂಗ ವಾಳದ, ಮಹದೇವ ದುರದುಂಡಿ, ಸತೀಶ ಹೊಸಪೇಟಿ, ಬಸವರಾಜ ನಿಡೋಣಿ, ಅಪ್ಪು ಸಿದ್ದಾಪುರ, ಸಿದ್ದಪ್ಪ ದುರದುಂಡಿ, ಗಜಾನನ ಡಬ್ಬಣ್ಣವರ ರಮೇಶ ದುರದುಂಡಿ, ಕಮಿಟಿ ಸರ್ವ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.   

ಕಾರ್ಯಕ್ರಮವನ್ನು ಯುವ ಸಂಘಟಕ ಸಿದ್ದಣ್ಣ ದುರದುಂಡಿ ಸ್ವಾಗತಿಸಿದರು, ಗೋಕಾಕದ ಶೃತಿ ಜಾಧವ ನಿರೂಪಿಸಿದರು, ಸದಾಶಿವ ದುರದುಂಡಿ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group