ಬೀದರ – ರವಿವಾರ ಬೀದರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದು ಸುಮಾರು ೨ ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಜಪ್ತಿ ಮಾಡಲಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಜಿಲ್ಲೆಯಲ್ಲಿ ತೊಗರಿ ಬೆಳೆಯಲ್ಲಿ ಗಾಂಜಾ ಗಿಡಗಳನ್ನು ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿ ಬೆಳೆಯಲಾಗಿದ್ದು ನಿನ್ನೆ ೮೦೦ ಕ್ಕೂ ಅಧಿಕ ಗಾಂಜಾ ಗಿಡಗಳನ್ನು ನಾಶಮಾಡಲಾಗಿದೆ ಎಂದರು.
ಗಾಂಜಾ ಬೆಳೆದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿ ಪರಾರಿಯಾಗಿದ್ದು ಆರೋಪಿ ಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಗಾಂಜಾ ಕಾರ್ಯಾಚರಣೆ ಕೈಗೊಂಡ ಮಂಠಾಳ ಪಿಎಸ್ಐ ಸುವರ್ಣ ಮಲಶೆಟ್ಟಿಗೆ ರೂ.೧೦ ಸಾವಿರ ಬಹುಮಾನ ನೀಡಿದರು.
ಇನ್ನೊಂದು ಪ್ರಕರಣದಲ್ಲಿ ಹುಮನಾಬಾದ ಪಟ್ಟಣದ ತೇರು ಮೈದಾನದಲ್ಲಿ ಅರ್ಜುನ ಎಂಬ ವ್ಯಕ್ತಿಯ ನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಮನೆಯಲ್ಲಿ ತಲ್ವಾರಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ