Homeಸುದ್ದಿಗಳುಸಿಂದಗಿ ನಗರದಲ್ಲಿ ಕಳಪೆ ಒಳಚರಂಡಿ ಯೋಜನೆ, ಅಭಿವೃದ್ಧಿ ಶೂನ್ಯ

ಸಿಂದಗಿ ನಗರದಲ್ಲಿ ಕಳಪೆ ಒಳಚರಂಡಿ ಯೋಜನೆ, ಅಭಿವೃದ್ಧಿ ಶೂನ್ಯ

ಸಭೆಯಲ್ಲಿ ಸದಸ್ಯರ ಜಟಾಪಟಿ

ಸಿಂದಗಿ; ಪಟ್ಟಣದ 23 ವಾರ್ಡುಗಳಲ್ಲಿ ಒಳಚರಂಡಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಕಳಪೆಯಾಗಿ ನಿರ್ಮಿಸಲಾಗುತ್ತಿದೆ. ಸಾರ್ವಜನಿಕರು ಸದಸ್ಯರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಬರೀ ದಾಖಲೆಗಳಲ್ಲಿ ಹಣ ಲೂಟಿ ಮಾಡುತ್ತ ಎಲ್ಲರು ಗಾಜಿನ ಮನೆಯಲ್ಲಿ ಕುಳಿತಿದ್ದಾರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಹಣಮಂತ ಸುಣಗಾರ ಮತ್ತು ಉಪಾಧ್ಯಕ್ಷ ಹಾಸೀಂಪೀರ ಆಳಂದರ ನಡುವೆ ಜಟಾಪಟಿ ನಡೆಯಿತು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಉಪಾಧ್ಯಕ್ಷ ಮಾತನಾಡಿ, ಕಳೆದ ನಿಮ್ಮ ಅಧಿಕಾರಾವಧಿಯಲ್ಲಿ ಹಲವಾರು ಯೋಜನೆಗಳನ್ನು ಬರೀ ದಾಖಲೆಯಲ್ಲಿ ಮಾಡಿ ಹಣ ಲೂಟಿ ಮಾಡಿದ್ದೀರಿ ನಾವೇನು ಹಾಗೆ ಮಾಡಿಲ್ಲ. ಹಿಂದಿನ ಅವಧಿಯಲ್ಲಿನ ಎಲ್ಲಾ ಕಾಮಗಾರಿಗಳ ಬಗ್ಗೆ ತನಿಖೆಗೆ ಹಾಕಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಅಲ್ಲಿಯವರೆಗೆ ಬಿಡುವ ಮಾತೇ ಇಲ್ಲ ಎಂದು ಎದುರುತ್ತರ ನೀಡಿದರು.

ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ವಿಷಯ ಪ್ರಸ್ತಾಪಿಸಿ, ಪಟ್ಟಣದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡಲು ರೂ 60 ಕೋಟಿಗಳ ಅಂದಾಜು ಪತ್ರಿಕೆ ರೂಪಿಸಿ ವರದಿ ಸಲ್ಲಿಸಲಾಗಿತ್ತು ಅದು ಈ ಬಜೆಟ್ ನಲ್ಲಿ ಪೂರ್ಣಗೊಳ್ಳದು ಎಂದು ಮರು ಕ್ರಿಯಾಯೋಜನೆ ರೂಪಿಸುವಂತೆ ಮೇಲಾಧಿಕಾರಿಗಳು ಸೂಚಿಸಿರುವುದರಿಂದ ರೂ. 93.53 ಲಕ್ಷಗಳ ಅಂದಾಜು ಪತ್ರಿಕೆ ತಯಾರಿಸಲಾಗಿದೆ ಎಂದು ಹೇಳುತ್ತಿದಂತೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಹಿರಿಯ ಸದಸ್ಯ ರಾಜಣ್ಣಿ ನಾರಾಯಣಕರ ಅವರು ಸಭೆ ಪ್ರಾರಂಭವಾಗುವ ಮುಂಚೆನೇ ಕಳೆದ ಒಂದು ವರ್ಷದಿಂದ ಸದಸ್ಯರ ಗೌರವಧನ ನೀಡಿಲ್ಲ ಅದನ್ನು ಇತ್ಯರ್ಥ ಮಾಡಿ ಸಭೆ ನಡೆಸಿ ಸದಸ್ಯರ ಗೌರವಧನ ನೀಡುವ ಯೋಗ್ಯತೆಯಿಲ್ಲ ಏನು ಅಧಿಕಾರ ನಡೆಸುತ್ತೀರಿ ಎಂದು ಅಪರೋಕ್ಷವಾಗಿ ಅಧ್ಯಕ್ಷರಿಗೆ ಚಾಟಿ ಬೀಸಿದರು.

ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಪುರಸಭೆ ಅನುದಾನದಲ್ಲಿ ಮೀಸಲಾತಿಗನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ವಾರದ ಲೇಔಟ್ ಮತ್ತು ಡೋಣೂರ ಲೇಔಟ್‍ನಲ್ಲಿರುವ ಪ್ಲಾಟುಗಳು ಬೆರೆಯೊಬ್ಬರ ಹೆಸರಿನಿಂದ ಪರಭಾರೆಯಾದ ಬಗ್ಗೆ ಎ.ಸಿ ಮತ್ತು ಪಿಡಿ ಅವರ ಜೊತೆ ಚರ್ಚಿಸಿ ಮುಖ್ಯಾಧಿಕಾರಿಯ ಮೇಲೆ ಪ್ರಕರಣ ದಾಖಲಿಸುತ್ತೇನೆ ಆವಾಗ್ಗೆ ಸರಿದೂಗುತ್ತದೆ ಅಲ್ಲದೆ ಚರ್ಚೆಯಾದ ವಿಷಯಗಳ ಕುರಿತು ಶೀಘ್ರದಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.

ಸದಸ್ಯ ಭಾಷಾಸಾಬ ತಾಂಬೋಳಿ ಮಾತನಾಡಿ, ನೀರು ನಿರ್ವಹಣೆಗಾಗಿ ಹಲವಾರು ಬಾರಿ ಕೇಳಿಕಂಡಾಗ್ಯೂ ಸಹ ಕಾರ್ಯರೂಪಕ್ಕೆ ಬರುತ್ತಿಲ್ಲ ಕೂಡಲೇ ಕ್ರಮ ಜರುಗಿಸಿ ಎಂದು ಹೇಳಿ ಪಟ್ಟಣದಲ್ಲಿರುವ ಎಲ್ಲ ಉದ್ಯಾನವನ ಅಭಿವೃದ್ಧಿ ಹಾಗೂ ಹೈಮಾಸ್ಕ್ ಅಳವಡಿಕೆಗೆ ಜಿಲ್ಲಾಧಿಕಾರಿಗಳ ಮೂಲಕ ಸಚಿವ ಬೈರತಿ ಬಸವರಾಜ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿ ನೀಡಿದ್ದಾರೆ ಎಂದರು.

ಸದಸ್ಯ ಬಸವರಾಜ ಯರನಾಳ ಮಾತನಾಡಿ, ಮಲಗಾಣ ರಸ್ತೆ ಹಾಗೂ ಮೋರಟಗಿ ರಸ್ತೆಯಲ್ಲಿರುವ ಸ್ಮಶಾನಕ್ಕೆ ಹೋಗುವ ರಸ್ತೆಗಳು ಒತ್ತುವರಿಯಾಗಿದ್ದಲ್ಲದೆ ಪುರಸಭೆಯಿಂದ ಉತಾರ ರಚಿಸಿ ಮಾಡಿಕೊಡಲಾಗಿದ್ದು ಆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಇಲ್ಲದಿದ್ದರೆ ನಾವೇ ಅಧಿಕಾರಗಳ ಮೇಲೆ ಕೇಸ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸದಸ್ಯೆ ಪ್ರತಿಭಾ ಕಲ್ಲೂರ ಮಾತನಾಡಿ, ವಾರ್ಡ ನಂ 1 ರಲ್ಲಿರುವ ಶಾಂತೇಶ್ವರ ಉದ್ಯಾನವನದಲ್ಲಿ ಮುಳ್ಳುಕಂಟಿ ಬೆಳೆದಿರುವ ಬಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದಾಗ್ಯೂ ಯಾವುದೇ ಕ್ರಮ ಜರುಗಿಸಿಲ್ಲ ಅಲ್ಲೆ ಮೋಬಾಯಿಲ್ ಕರೆ ಮಾಡಿದ್ದರು ಸ್ಪಂದಿಸುತ್ತಿಲ್ಲ ಆರೋಪಿಸಿದರು.

ಕಳೆದ ಸಭೆಯಲ್ಲಿ ಚರ್ಚಿಸಿದಂತೆ ಮುಖ್ಯಾಧಿಕಾರಿ ವರ್ಗಾವಣೆಗೆ ಠರಾವು ಪಾಸು ಮಾಡಿ ನಕಲು ಪ್ರತಿ ಪೂರೈಸಬೇಕು ಮತ್ತು ವಾರದ ಲೇಔಟ್ ಮತ್ತು ಡೋಣೂರ ಲೇಔಟ್‍ನಲ್ಲಿ ಬೆರೋಬ್ಬರ ಹೆಸರಿನಲ್ಲಿ ಉತಾರ ತಯಾರಿಸಿ ಮಾರಾಟ ಮಾಡಲಾದ ಆಸ್ತಿಗಳ ಬಗ್ಗೆ ತನಿಖೆಯಾಗಬೇಕು ಅದರಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಸದಸ್ಯ ಸಂದೀಪ ಚೌರ ಆಗ್ರಹಿಸಿದರು.

ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, ಎಸ್ ಟಿ ಅಲ್ಲದವರ ಹೆಸರಿನಲ್ಲದವರಿಗೆ ಟೆಂಡರ ನೀಡಿದ್ದು ಸರಿಯಲ್ಲ. ಎಸ್‍ಎಫ್‍ಸಿ ಅನುದಾನ ಬಂದಿರುವ ಬಗ್ಗೆ ದಾಖಲಾತಿ ಪೂರೈಸಬೇಕು ಅಲ್ಲದೆ ಫಲಾನುಭವಿಗಳ ಅಯ್ಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಮುಖ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

RELATED ARTICLES

Most Popular

error: Content is protected !!
Join WhatsApp Group