ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

0
834

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು.

ತಾಲೂಕಿನ ಮೋರಟಗಿ ಸ್ಟೇಶನ್ ವ್ಯಾಪ್ತಿಗೆ ಸೇರಿರುವ ಕುಳೇಕುಮಟಗಿ, ಬಗಲೂರ, ಬಂಟನೂರ, ಹಂಚಿನಾಳ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಸಂಚರಿಸಿ  ಅನಧಿಕೃತವಾಗಿ ಬಳಸುತ್ತಿರುವ ಪಂಪ್ ಸೆಟ್ ಮೋಟಾರಗಳು ಹಾಗೂ ಮನೆಗಳಿಗೆ ಹಾಕಿರುವ ವಾಯರ್ ಗಳನ್ನು ವಶಪಡಿಸಿಕೊಂಡು  ಗ್ರಾಹಕರನ್ನು ಉದ್ದೇಶಿಸಿ ಅವರು ಮಾತನಾಡಿ, ಅನಧಿಕೃತ ವಿದ್ಯುತ್ ತಡೆಗಟ್ಟಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ  ರೈತರಿಗಾಗಿ ಹಾಗೂ ಊರಿನ ಬಡ ಗ್ರಾಹಕರಿಗಾಗಿ ಹತ್ತು ಹಲವಾರು ಯೋಜನೆಗಳು ನೀಡಿವೆ ಅದರ ಉಪಯೋಗ ಪಡೆದು ಮೀಟರ ಅಳವಡಿಸಿಕೊಂಡು ವಿದ್ಯುತ್ ಬಳಕೆ ಮಾಡಿಕೊಳ್ಳಿ  ಹಾಗೂ ಅಧಿಕೃತವಾಗಿ ವಿದ್ಯುತ್ ಉಪಯೋಗಿಸುತ್ತಿರುವ ಗ್ರಾಹಕರು ಮಿತವಾಗಿ ಹಾಗೂ ಅವಶ್ಯಕತೆಗೆ ಮಾತ್ರ ವಿದ್ಯುತ್ ಬಳಸಿ ಮತ್ತು ಎಲ್ ಈ ಡಿ ಬಲ್ಬ ಬಳಸಲು ಕೋರಿದರು.

ಇದೇ ಸಂದರ್ಭದಲ್ಲಿ  ಕೆ ಎನ್ ಶಿವಣಗಿ, ಗ್ರಾಮ ವಿದ್ಯುತ್ ಪ್ರತಿನಿಧಿ ರಫೀಕ್ ಕಣ್ಣಿ, ಲೈನ್ ಮೆನ್ ಗಳಾದ ಆನಂದ ಶರಣಪ್ಪ, ಆರ್, ಎಂ ಯಡ್ರಾಮಿ, ಆಶಿಫ್ ಮಣಿಯಾರ, ಮಲ್ಲು ದೇಸಾಯಿ, ಸೈಫನ್ ಜಾಲಿಗಿಡದ, ಗುರು ಅಗಸರ, ಸೇರಿದಂತೆ ಹಲವರು ಇದ್ದರು.