ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಜಲಸಂಗಿ ಗ್ರಾಮದಲ್ಲಿ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಹಾರಿ ಬಂದು ಬಿದ್ದ ಭಾರಿ ಬಲೂನ್ ಒಂದು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿ ಮಾಡಿತು
TIFR ( Tata Institute of Fundamental Research.) ಕಂಪನಿಯ ಸ್ಯಾಟಲೈಟ್ ಪೇಲೋಡ್ ಬಲೂನ್ ಲ್ಯಾಂಡ್ ಆದ ಬಗ್ಗೆ ಮಾಹಿತಿ….
ಹವಾಮಾನ ಅಧ್ಯಯನಕ್ಕಾಗಿ ನಿನ್ನೆ ದಿನ ರಾತ್ರಿ 10 ಗಂಟೆಗೆ ಹೈದ್ರಾಬಾದ್ ದಿಂದ ಉಡಾವಣೆ ಮಾಡಲಾಗಿದ್ದು ಬೇಲೂನ್ ನ ಕಾರ್ಯಕ್ಷಮತೆ 6-7 ತಾಸು ಇದೆ.ಹೈದ್ರಾಬಾದ್ ನಿಂದ ಬಿಟ್ಟ ಬಲೂನ್ ಬಂದು ಬಿದ್ದಿದ್ದು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ.
ಈ ಬಲೂನು ಕೇಂದ್ರ ಸರ್ಕಾರದ ಅಧ್ಯಯನ ಅಡಿಯಲ್ಲಿ ಬರುವ ಸಂಶೋಧನಾ ಸ್ಯಾಟಲೈಟ್ ಪೇಲೋಡ್ ಆಗಿರುವ ಬಗ್ಗೆ ಮಾಹಿತಿ ಹವಾಮಾನದ ಕುರಿತು ಅಧ್ಯಯನ ಮಾಡಲು ಬಿಟ್ಟಿರುವ ಬಲೂನು ಎಂದು ಮಾಹಿತಿ ಇದೆ. ಹವಾಮಾನ ಮಾಹಿತಿ ಸಲುವಾಗಿ ಬಿಟ್ಟ ಬಲೂನ್ ನಿಂದ ಮಾಹಿತಿ ಸಂಗ್ರಹಿಸಲು ಟಾಟಾ ವಿಜ್ಞಾನಿಗಳು ಗ್ರಾಮಕ್ಕೆ ಬರುತ್ತಿದ್ದಾರೆನ್ನಲಾಗಿದೆ.
ಸದರಿ ಸ್ಯಾಟಲೈಟ್ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ ಬೆಲೂನ್ ಆಗಿದ್ದು ಇದು ಸಿಕ್ಕವರು ಕೂಡಲೇ ಈ ಕೆಳಕಂಡ ನಂಬರ್ ಗೆ ಕರೆ ಮಾಡಲು ನಂಬರ ಸಹಿತ ಮಾಹಿತಿ ಹಾಕಿರುವ ಟಾಟಾ ಸಂಸ್ಥೆ ಯವರು, .ಕೆಳಗೆ ಬಿದ್ದ ಬಲೂನನ್ನ ಹಾಳು ಮಾಡಬಾರದು ಎಂದು ಇಂಗ್ಲಿಷ್, ಕನ್ನಡ , ಮರಾಠಿಯಲ್ಲಿ ಬರೆದು ನಂಬರ್ ಹಾಕಿರುವ ಮಾಹಿತಿ ಇದೆ..ಸಧ್ಯಕ್ಕೆ ಗ್ರಾಮದಲ್ಲಿ ಬಿದ್ದಿರಿವ ಬಲೂನ್ ನೋಡಲು ಜನ ಜಾತ್ರೆ ನೆರೆದಿದ್ದು ಯಾವುದೆ ಹಾನಿ ಯಾಗಿಲ್ಲ
ವರದಿ : ನಂದಕುಮಾರ ಕರಂಜೆ, ಬೀದರ