ಬೀದರ – ಭಾರತದ ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಇದು ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬಂದ ಸಂಸ್ಕೃತಿ.
ಹೋಳಿ ಹಬ್ಬ ಆಡುವುದು ಹಿಂದಿನ ದಿನದಂದು ಸಂಸ್ಕೃತಿಯಂತೆ ಬೆಂಕಿಯಲ್ಲಿ ಕಾಮವನ್ನು ಸುಟ್ಟಿ ಮರುದಿನ ರಂಗು ಹಚ್ಚಿಕೊಂಡು ಕೆಟ್ಟ ಪದ್ಧತಿಗಳು ಸುಳ್ಳು ನುಡಿಗಳು ತೊರೆದು ಉತ್ತಮ ಜೀವನ ಸುಧಾರಣೆಯನ್ನು ಮಾಡಿಕೊಳ್ಳಲು ಈ ರಂಗಿನ ಹಬ್ಬ ಸಾಕ್ಷಿ ಎಂದು ಪ್ರಭು ಚವ್ಹಾಣ ಹೇಳಿದರು.
ರಾಜ್ಯದ ಪಶುಸಂಗೋಪನಾ ಸಚಿವ ರಾದ ಪ್ರಭು ಬಿ.ಚೌವ್ಹಾಣ ಅವರು ತಮ್ಮ ತಾಂಡಾದ ಜನರ ಜೊತೆ ತಮ್ಮ ಬಂಜಾರ ಸಮಾಜದ ಜೊತೆ ಸೇರಿಕೊಂಡು ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ಹೋಳಿ ಹಬ್ಬದ ಲಂಬಾಣಿ ಕುಣಿತದ ಜೊತೆಗೆ ಕೋಲಾಟ ಆಡುತ್ತಾ ವಿವಿಧ ರೀತಿಯ ರಂಗಗಳನ್ನು ಹೆಚ್ಚುತ್ತ ಜನರ ಜೊತೆ ದಂಪತಿಗಳಿಬ್ಬರೂ ಕುಣಿದು ಕುಪ್ಪಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದೇಶಾದ್ಯಂತ 9 ಕೋಟಿ ಬಂಜಾರ ಸಮಾಜ ಜನರು ಇಂದು ಹೋಳಿಯನ್ನು ಆಚರಿಸುತ್ತಿದ್ದಾರೆ. ನಮ್ಮ ಹಿಂದಿನಿಂದ ಬಂದ ಸಂಸ್ಕೃತಿ ಈ ಸಂಸ್ಕೃತಿಯಂತೆ ನಾವು ಹಾಡುತ್ತಾ ಕುಣಿಯುತ್ತಾ ಬೊಬ್ಬೆ ಹೊಡೆಯುತ್ತಾ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತೇವೆ ಎಂದರು.
ದೇಶದ ಪ್ರತಿ ರಾಜ್ಯದಲ್ಲೂ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ ಈ ಹಬ್ಬವು ನಮ್ಮ ಸಮಾಜದ ಜನರು ತಮ್ಮ ಕುಟುಂಬದ ಜೊತೆ ಸೇರಿಕೊಂಡು ಹೋಳಿಯನ್ನು ಆಚರಿಸುತ್ತ ಕಟ್ಟಾಚರಣೆಯಿಂದ ಮುಕ್ತಿ ಪಡೆಯುತ್ತಾರೆ. ವಿವಿಧ ರೀತಿಯ ಸೌಂಡ್ ಗಳನ್ನು ಹಚ್ಚಿ ಹಲಗಿ ಬಾರಿಸುತ್ತಾ ಕುಣಿದು ಕುಪ್ಪಳಿಸುವ ಹಬ್ಬ ಇದು ಮತ್ತು ಯುವಕರಲ್ಲಿ ಹರ್ಷವನ್ನು ತರುವ ಹಬ್ಬ ಎಂದು ಹೇಳಿದರು.
ಇನ್ನು ಬಂಜಾರ ಸಮಾಜದವರು ಈ ಹಬ್ಬವನ್ನು ರಂಗಪಂಚಮಿ ಉತ್ಸವ ಹಬ್ಬ ಎಂದು ಆಚರಿಸುತ್ತಾರೆ. ಈ ಹಬ್ಬವು ಎಲ್ಲರೂ ಜೀವನದಲ್ಲಿ ಹರ್ಷ ಉತ್ತರಲ್ಲಿ ಎಲ್ಲರ ಬಾಳು ಸುಂದರವಾಗಿರಲಿ ಕೆಟ್ಟದನ್ನು ಬಿಟ್ಟು ಒಳ್ಳೆಯ ಕೆಲಸವನ್ನು ಮಾಡುತ್ತಾ ಉತ್ತಮ ಜೀವನ ಸಾಗಿಸುವ ಅಂತ ಶಕ್ತಿ ಭಗವಂತ ನೀಡಲಿ ಎಂದು ಎಲ್ಲರಿಗೂ ಸಚಿವರು ಹಾರೈಸಿದರು.
ಇದೇ ಸಂದರ್ಭದಲ್ಲಿ ಘಮಸುಬಾಯಿ ತಾಂಡಾದ ಜನ ಸೇರಿದಂತೆ ಅಕ್ಕಪಕ್ಕದ ತಾಂಡದವರು ಹಾಗೂ ಯುವಕರು ಸೇರಿ ಈ ಹೋಳಿ ಹಬ್ಬವನ್ನು ಕುಣಿದು ಕುಪ್ಪಳಿಸುತ್ತಾ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ