ಕುಳಲಿಯಲ್ಲಿ 20 ನೇ ಅಖಿಲ ಭಾರತ ವೇದಾಂತ ಪರಿಷತ್ -ಪೂವ೯ಭಾವಿ ಸಭೆ

Must Read

ಮುಧೋಳ-_ ಮುಧೋಳ ತಾಲೂಕಿನ ಪಾವನ ಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ನಡೆಯುವ “ಅಖಿಲ ಭಾರತ ವೇದಾಂತ ಪರಿಷತ್” ಮಹಾಸಭೆಯ ದಿನಾಂಕ ನಿಗದಿ ಪಡಿಸುವ ಹಿನ್ನೆಲೆಯಲ್ಲಿ ಶನಿವಾರ ದಿ.22 ರಂದು ಮುಂಜಾನೆ 9 ಗಂಟೆಗೆ ಗ್ರಾಮದ ಸವ೯ಹಿರಿಯರ ಪೂವ೯ಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಗ್ರಾಮದ ಗಣ್ಯರಾದ ನಾಗಪ್ಪ ಐಹೊಳೆ ಅವರು ತಿಳಿಸಿದ್ದಾರೆ.

ಶ್ರೀ ಮಠದ ಪೂಜ್ಯರು ದಾಸೋಹ ಮೂರ್ತಿಗಳಾದ ಶಂಕರಾನಂದ ಶ್ರೀಗಳ ಸಮ್ಮುಖದಲ್ಲಿ ಸಾಧು ಚಕ್ರವರ್ತಿ ಶ್ರೀ ಶಿವಾನಂದ ಭಾರತಿ ಶ್ರೀಗಳನ್ನು ಬೆಳ್ಳಿ ರಥದಲ್ಲಿ ಉತ್ಸವ ಮಾಡುವುದು. ಸಾವಿರ ಕುಂಭಗಳ ಮೆರವಣಿಗೆ .ಸಂಗೀತೋತ್ಸವ ಏಪ೯ಡಿಸುವದು, ಉಪನ್ಯಾಸ ನೀಡುವ ಅತಿಥಿಗಳನ್ನು ಆಮಂತ್ರಿಸುವುದು ಹಾಗೂ 10 ದಿನಗಳ ಕಾಲ ಆಧ್ಯಾತ್ಮಿಕ ಚಿಂತನ 100 ಕಲಾತಂಡಗಳಿಗೆ ಗುರುತಿಸಿ -ಪ್ರಶಸ್ತಿ- ಪುರಸ್ಕಾರ ನೀಡುವುದು ಹಲವಾರು ವಿಷಯಗಳನ್ನು ಚಚಿ೯ಸಲಾಗುವದು.

ಈ ಸಭೆಯಲ್ಲಿ ಕುಳಲಿ ಗ್ರಾಮದ ಸವ೯ ಹಿರಿಯರು.ಹಾಗೂ ಮುಧೋಳ ತಾಲೂಕಿನ ಸಾಹಿತಿಗಳು, ಜನಪದ ಸಂಗೀತ ಕ್ಷೇತ್ರದ ಕಲಾವಿದರು, ಎಲ್ಲ ಸಾಂಸ್ಕೃತಿಕ ಸಂಘಗಳ ಮುಖಂಡರು, ಸದಸ್ಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಹತ್ತು ದಿನ ನಡೆಯುವ ವೇದಾಂತ ಪರಿಷತ್ತನ್ನು ಯಶಸ್ವಿಗೊಳಿಸಲು ಅವರು ಕೋರಿದರು.

ಮುಖಂಡರಾದ ಪಿ.ಜಿ.ಗಣಿ, ಶಿವಪ್ಪಗೌಡ ಪವಾಡಶೆಟ್ಟಿ‌,  ಸಂಗಪ್ಪ ಗಣಿ, ಗಂಗಪ್ಪ ಲಕ್ಕಪ್ಪಗೋಳ ಹಾಗೂ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group